ಮಹಾದೇವ ಮಂದಿರ ನವೀಕರಣಕ್ಕೆ ಚಾಲನೆ

7Huk2
Published on

ಹುಕ್ಕೇರಿ: ಹಿರಾ ಶುಗರ್ಸ್‌ ನೌಕರರ ಕಾಲನಿಯಲ್ಲಿರುವ ಮಧುರ ಮಹಾದೇವ ಮಂದಿರ ಜೀರ್ಣಾವಸ್ಥೆಯಲ್ಲಿ ಇರುವುದರಿಂದ ಅದನ್ನು ನವೀಕರಣಗೊಳಿಸಲು ಮುಂದಾಗಿದ್ದೇವೆ ಎಂದು ಹಿರಾ ಶುಗರ್ಸ್‌ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ ಹೇಳಿದರು.

ತಾಲೂಕಿನ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಕಾಲನಿಯಲ್ಲಿ ಶುಕ್ರವಾರ ಮಧುರ ಮಹಾದೇವ ಮಂದಿರ ನವೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ಮಾತನಾಡಿ, ಕಾರ್ಖಾನೆಯ ಅ ಮತ್ತು ಬ ವರ್ಗ ಸದಸ್ಯರಿಗೆ ಪ್ರತಿ ಕೆಜಿ ಸಕ್ಕರೆಗೆ 17 ರೂ. ರಿಯಾಯಿತಿ ದರದಂತೆ 50 ಕೆಜಿ ಸಕ್ಕರೆ ವಿತರಿಸುವ ಕಾರ್ಯ ಪ್ರಾರಂಭಿಸಲಾಗಿದೆ.

2024-25ನೇ ಸಾಲಿನಲ್ಲಿ ಎಲ್ಲ ಕಬ್ಬು ಪೂರೈಸಿದ ಮೆಂಬರ್ ಮತ್ತು ನಾನ್ ಮೆಂಬರ್ ರೈತ ಸದಸ್ಯರಿಗೂ ಸಹ 17 ರೂ. ರಿಯಾಯಿತಿ ದರದಂತೆ ಪ್ರತಿ ಟನ್‌ಗೆ ಅರ್ಧ ಕೆಜಿ ಸಕ್ಕರೆಯನ್ನು ಏಪ್ರಿಲ್ 1ರಿಂದ ಸೆ.30ರ ವರೆಗೆ ವಿತರಿಸಲಾಗುವುದು. ಕಬ್ಬು ಪೂರೈಸಿದ ರೈತರಿಗೆ ಮಾರ್ಚ್ 31ರ ಒಳಗಾಗಿ ಸಕ್ಕರೆ ಸ್ಲೀಪ್ ಪೂರೈಸಲಾಗುವುದು ಎಂದು ತಿಳಿಸಿದರು. ಸಂಚಾಲಕರಾದ ಶಿವನಾಯಿಕ ನಾಯಿಕ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಬಸಪ್ಪ ಮರಡಿ, ಸುರೇಂದ್ರ ದೊಡ್ಡಲಿಂಗನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net