ಮಹಾದೇವ ತಾತ ರಥೋತ್ಸವ ಸಂಪನ್ನ

10HDL 02
ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಸಮೀಪ ಮಹಾದೇವ ತಾತನ ರಥೋತ್ಸವ ಜರುಗಿತು.
Published on

ಹೂವಿನಹಡಗಲಿ: ತಾಲೂಕಿನ ಹೊಳಗುಂದಿ ಸಮೀಪ ಮಹಾದೇವತಾತನ ರಥೋತ್ಸವ ಶುಕ್ರವಾರ ಜರುಗಿತು. ಸಮಾಳ, ನಂದಿಕೋಲು ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರೆವಣಿಗೆ ಮಾಡಲಾಯಿತು.

ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಭಕ್ತರು ಸ್ವಾಮಿಗೆ ವಿಶೇಷ ಪೂಜೆ, ಹರಕೆ ಸಲ್ಲಿಸಿದರು. ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಉತ್ತಂಗಿಯ ಸೋಮಶಂಖರ ಸ್ವಾಮೀಜಿ, ಹಂಪಸಾಗರದ ರುದ್ರಮುನಿ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net