ಮಹಾದೇವ ತಾತನ 41ನೇ ಪುಣ್ಯಸ್ಮರಣೋತ್ಸವ

Published on

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದ ಪ್ರಣವಜ್ಯೋತಿ ಮಹಾಕ್ಷೇತ್ರದ ಶ್ರೀ ವಿಶ್ವಾರಾಧ್ಯ ಗುರುಕುಲ ಮಠದಲ್ಲಿ ಲಿಂಗೈಕ್ಯ ಹಂದ್ಯಾಳು ಮಠದ ಮಹಾದೇವತಾತ ಅವರ 41ನೇ ಪುಣ್ಮಸ್ಮರಣೆ ಡಿ.18ರಂದು ಜರುಗಲಿದೆ.

ಉಜ್ಜಿಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಪುರಾಣ ಪ್ರವಚನ ಡಿ.10ರಿಂದ ಆರಂಭಗೊಂಡಿದ್ದು, ವಿಶ್ವೇಶ್ವರಯ್ಯ ಸ್ವಾಮೀಜಿ ಪುರಾಣ ಪ್ರವಚನ, ಎ.ಎಂ. ಸೋಮಶೇಖರಯ್ಯಸ್ವಾಮಿ ಹಾರ‌್ಮೋನಿಯಂಗೆ ಸಿ.ಡಿ.ಮೌನೇಶ ತಬಲಾಸಾಥ್ ನೀಡಿದರು. ಡಿ.18ರಂದು ಪುರಾಣ ಮಹಾಮಂಗಲ, ಉತ್ಸವ(ಉಚ್ಛಾಯ) ಮತ್ತು ದೀಪೋತ್ಸವ ಜರುಗಲಿದೆ.

ಬೆಳಗ್ಗೆ ಮಾತೃಶ್ರೀ ಗೌರಮ್ಮನವರ, ಶ್ರೀತಾತನವರ ಕರ್ತೃ ಗದ್ದುಗೆ, ಪ್ರಣವಜ್ಯೋತಿ ಪಂಚಾಚಾರ್ಯರ ಮಹಾಮೂರ್ತಿಗಳಿಗೆ ವಿಶೇಷ ರುದ್ರಾಭೀಷೇಕ, ಗಣಾರಾಧನೆ ಜರುಗಲಿದೆ. ತೆಕ್ಕಲಕೋಟೆ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದು, ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net