ಡಿ.೨೩ ರಿಂದ ಮಹದೇಶ್ವರ ಕ್ಷೇತ್ರದ ಜಾತ್ರೋತ್ಸವ ಆರಂಭ

mruthunjaya temple
Published on

ಮಡಿಕೇರಿ: ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಜಾತ್ರೋತ್ಸವವು ಡಿ.೨೩ ರಿಂದ ಡಿ.೨೮ರ ವರೆಗೆ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಶಶಿ ಜನಾರ್ಧನ ಕಟ್ಟೆಮನೆ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆರು ದಿನಗಳ ಕಾಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಜಾತ್ರೋತ್ಸವ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಡಿ.೨೩ ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ೧೦.೩೦ ಗಂಟೆಗೆ ಹೊರಕಾಣಿಕೆ ಸಮರ್ಪಣೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ೧ ಗಂಟೆಗೆ ಅನ್ನ ಸಂತರ್ಪಣೆಯಾಗಲಿದೆ. ಸಂಜೆ ೭.೩೦ ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ರಾತ್ರಿ ೮.೩೦ ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ೯ ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ಅಂದು ಹೊರೆಕಾಣಿಕೆ ತರುವವರು ಬೆಳಿಗ್ಗೆ ೧೧.೩೦ ಗಂಟೆಯ ಒಳಗೆ ದೇವಾಲಯದ ಉಗ್ರಾಣಕ್ಕೆ ತಲುಪಿಸುವಂತೆ ಕೋರಿದ್ದಾರೆ.

ಡಿ.೨೪ ರಂದು ಬೆಳಿಗ್ಗೆ ೫.೩೦ ಗಂಟೆಗೆ ನೈರ್ಮಾಲ್ಯ ಬಲಿ, ಮಧ್ಯಾಹ್ನ ೧೨ ಗಂಟೆಗೆ ಧ್ವಜಸ್ತಂಭ ಪೂಜೆ, ೧೨.೧೫ ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೬.೩೦ ಗಂಟೆಗೆ ಶ್ರೀಭೂತಬಲಿ (ತೂಚಂಬಲಿ), ೭.೪೫ ಗಂಟೆಗೆ ಧ್ವಜಸ್ತಂಭ ಪೂಜೆ, ರಾತ್ರಿ ೮ ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ೮.೩೦ ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಡಿ.೨೫ ರಂದು ಬೆಳಿಗ್ಗೆ ೫.೩೦ ಗಂಟೆಗೆ ನೈರ್ಮಾಲ್ಯ ಬಲಿ(ಇರುಬೆಳಕು), ಡಿ.೨೬ ರಂದು ಬೆಳಿಗ್ಗೆ ೫.೩೦ ಗಂಟೆಗೆ ನೈರ್ಮಾಲ್ಯ ಬಲಿ(ಇರುಬೆಳಕು), ಡಿ.೨೭ ರಂದು ಬೆಳಿಗ್ಗೆ ೭.೩೦ ಗಂಟೆಗೆ ಕವಾಟ ಪೂಜೆ, ೧೦.೩೦ ಗಂಟೆಗೆ ತೈಲಾಭ್ಯಂಜನ, ಪಂಚಾಮೃತ ಅಭಿಷೇಕ, ಡಿ.೨೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನವಕ ಕಲಶ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಲಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಶಶಿ ಜನಾರ್ಧನ ೯೪೪೯೪೦೨೩೦೫, ಕಾರ್ಯದರ್ಶಿ ಕಾಶಿ ಕಾರ್ಯಪ್ಪ ೯೪೮೦೨೪೪೬೪೨ ಸಂಪರ್ಕಿಸಬಹುದಾಗಿದೆ ಎಂದು ಶಶಿ ಜನಾರ್ಧನ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net