ಮಹಾದಾಯಿ ವೇದಿಕೆಯಿಂದ ಹೋರಾಟದ ಎಚ್ಚರಿಕೆ

web 3 - Copy
Published on

ಧಾರವಾಡ: ಮಹಾದಾಯಿ ಯೋಜನೆ ಅನುಷ್ಠಾನಕ್ಕಾಗಿ 4 ಜಿಲ್ಲೆ, 11 ತಾಲೂಕುಗಳ ಹೋರಾಟಗಾರರು, ರೈತ ಪ್ರಮುಖರ ನಿಯೋಗದೊಂದಿಗೆ ಶೀಘ್ರದಲ್ಲೇ ಕೇಂದ್ರ ಸಚಿವ ಪ್ರಲ್ಹಾದ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಮಹಾದಾಯಿಗಾಗಿ ಮಹಾ ವೇದಿಕೆಯ ಅಧ್ಯಕ್ಷ ಶಂಕರ ಅಂಬಲಿ ಹೇಳಿದರು.
ನಗರದ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾದಾಯಿಗಾಗಿ ಮಹಾ ವೇದಿಕೆಯ ರೈತಪರ ಕನ್ನಡಪರ ದಲಿತಪರ ಕಾರ್ಮಿಕಪರ ಮಹಿಳಾಪರ ಹೋರಾಟ ಸಂಘಟನೆಗಳ ಒಕ್ಕೂಟದ ಸಮÁಲೋಚನಾ ಸಭೆಯ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಹಾದಾಯಿ ನೀರಿಗಾಗಿ ಸುಽÃರ್ಘ ೪೭ ವರ್ಷಗಳ ಹೋರಾಟ ನಡೆದಿದೆ. ಆದರೂ ಆಳುವ ಪಕ್ಷಗಳ ರಾಜಕೀಯದಿಂದಾಗಿ ಯೋಜನೆ ಕೈಗೂಡಿಲ್ಲ. ಡಿಪಿಆರ್ ಆಗಿದೆ ಎಂದು ಟೆಂಡರ್ ಕರೆಯಲಾಗಿತ್ತು. ಆದರೆ, ಗೋವಾ ಸರ್ಕಾರ ವೈಲ್ಡ್ಲೈಫ್ ಬಗ್ಗೆ ತಕರಾರು ತೆಗೆದಿದ್ದರಿಂದ ಕಾನೂನು ತೊಡಕು ಎದುರಾಗಿದೆ. ಕೇಂದ್ರದ ಪ್ರಭಾವಿ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರು ಪ್ರಾಮÁಣಿಕ ಪ್ರಯತ್ನ ಮÁಡಬೇಕು. ಜೋಶಿ ಅವರ ನಿವಾಸದಲ್ಲಿ ನಿಯೋಗ ಭೇಟಿ ಆಗಲಿದ್ದು, ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ಮತ್ತೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು. `ಮಹಾದಾಯಿ ನೀರು ಕುಡಿದೇ ತೀರುತ್ತೇವೆ' ಎಂಬ ದೃಢ ಸಂಕಲ್ಪದೊAದಿಗೆ ಹೋರಾಟ ನಡೆಯಲಿದೆ ಎಂದರು.
ಮಹಾದಾಯಿ ಹೋರಾಟಗಾರರಾದ ಲೋಕನಾಥ ಹೆಬಸೂರ, ಜಾಲಿಕಟ್ಟಿಯ ಶ್ರೀ ಕೃಷ್ಣಾನಂದ ಸ್ವಾಮೀಜಿ, ಶಂಕರಗೌಡ ಪಾಟೀಲ, ಶಂಕರ ವಣ್ಣೂರ, ಮಹಾದೇವಿ ಪರಾಳಶೆಟ್ಟರ, ಲಕ್ಷ÷್ಮಣ ಬಕ್ಕಾಯಿ, ನಿಂಗಪ್ಪ ದೀವಟಗಿ, ಮುತ್ತು ಬೆಳ್ಳಕ್ಕಿ, ಸಲೀಂ ಸಂಗನಮಲ್ಲ, ಶ್ರೀಶೈಲಗೌಡ ಕಮತಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net