

ಹುಬ್ಬಳ್ಳಿ: ಮಹಾರಾಷ್ಟ್ರ ರಾಯಘಡ ರೇವದಂಡಾದ ಡಾ. ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಫೆ. 4ರಂದು ನಗರದ ವಿವಿಧ ಬಡಾವಣೆಗಳಲ್ಲಿ ಮಹಾ ಸ್ವಚ್ಛತಾ ಅಭಿಯಾನ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಸದಸ್ಯ ವಿಜಯ ಲಕ್ಕುಂಡಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ನಗರದ 152 ಸ್ಥಳಗಳಲ್ಲಿ ಅಂದು ಬೆಳಗ್ಗೆ 7 ರಿಂದ 10ರವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದರು.
20 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವರು. ಗೋಕುಲ ರಸ್ತೆಯ ಲೋಟಸ್ ಗಾರ್ಡನ್‌ನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಸ್ವಚ್ಛತಾ ಕಾರ್ಯದ ನೇತೃತ್ವವನ್ನು ಡಾ. ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಚಿನದಾದಾ ಧರ್ಮಾಧಿಕಾರಿ ವಹಿಸುವರು. ಅಭಿಯಾನದಲ್ಲಿ ಒಂದು ನಿಮಿಷದಲ್ಲಿ 2,500 ಟನ್ ಕಸ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
164 ಸ್ಥಳಗಳಲ್ಲಿ 109 ಕಾಲನಿಗಳು, 11 ಪೊಲೀಸ್ ಠಾಣೆಗಳು, 16 ಮಾರುಕಟ್ಟೆ ಪ್ರದೇಶಗಳು, 12 ಸರ್ಕಾರಿ ಕಚೇರಿ, ಮೂರು ಬಸ್ ನಿಲ್ದಾಣ, 16 ಮುಖ್ಯ ರಸ್ತೆಗಳು ಇರಲಿವೆ. ಒಟ್ಟು 234 ಎಕರೆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ನಡೆಯಲಿದೆ. ಅಂದಾಜು 2500 ಟನ ಕಸ ಸಂಗ್ರಹ ಆಗುವ ನಿರೀಕ್ಷೆ ಇದೆ ಎಂದರು.
ಪ್ರತಿಷ್ಠಾನದ ಸದಸ್ಯರಾದ ಸುಭಾಷಸಿಂಗ್ ಜಮಾದಾರ, ಸುನೀಲ ಅರಮನಿ, ಗೀರೀಶ ಚವರಗಿ ಇದ್ದರು.