ಮಳೆಗಾಗಿ ಕರಿಕಲ್ಲು ಪೂಜೆ

mkg1aa
Published on

ನ್ಯಾಮತಿ: ಪಟ್ಟಣದ ಕೃಷಿಕರು ಮಳೆಗಾಗಿ ಪ್ರಾರ್ಥಿಸಿ ಮಂಗಳವಾರ ಶ್ರೀ ವೀರಭದ್ರೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಕರಿಕಲ್ಲು ಚೌಡಮ್ಮನ ಸನ್ನಿದಾನದಲ್ಲಿ ಇರಿಸಿ ವಿಶೇಷ ಪೂಜೆ ನಡೆಸಿದರು.

ನ್ಯಾಮತಿ ಆರುಂಡಿ ಗಡಿ ಭಾಗದ ಉಪ್ಪು ನೀರಿನ ಹಳ್ಳದಂಡೆ ಮೇಲಿನ ಕರಿಕಲ್ಲು ಚೌಡಮ್ಮಗೆ ಮಹಾ ರುದ್ರಾಭಿಷೇಕದೊಂದಿಗೆ ವಿಭೂತಿ, ಗಂಧ, ಕುಂಕುಮ, ಅರಿಷಿಣ, ಹೂವು, ಬಿಲ್ವಪತ್ರೆ ಮಹಾ ಮಂಗಳಾರತಿ ಮಾಡಿದರು.

ಹಣ್ಣು ಕಾಯಿ ನೈವೇದ್ಯ, ಸಿಹಿ ಎಡೆ ಮಾಡಿದ ನಂತರ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿ, ಆಂಜನೇಯ ಸ್ವಾಮಿ ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಮಾಡಲಾಯಿತು.

ಪೂಜೆ ನಂತರ ಭಕ್ತಾಧಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ನ್ಯಾಮತಿ ಕೋಹಳ್ಳಿ ಮಠದ ವಿಶ್ವರಾಧ್ಯಶಾಸ್ತ್ರಿಪೌರೋಹಿತ್ಯದಲ್ಲಿ ಎಲ್ಲ್ಲ ಪೂಜಾ ಕಾರ್ಯಗಳು ನೆರವೇರಿದವು.

ಜಿ. ಹಾಲೇಶ್, ಜಿ. ಬಸವರಾಜಪ್ಪ, ಡಿ. ಶೇಖರಪ್ಪ, ಎಂ.ವಿರೇಶ್, ಎಚ್. ಪ್ರದೀಪ್, ಎ. ಪುನೀತ್, ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net