

ಬೀರೂರು: ಮಾರ್ಗದ ಕ್ಯಾಂಪ್ ಚೌಡೇಶ್ವರಿ ಬೀದಿಯ ಶ್ರೀ ಚೊಕ್ಕಾಪುರದ ಚೌಡೇಶ್ವರಿ ದೇವಿ ಮಹಾ ಚಂಡಿಕಾ ಹೋಮ ಜು.24ರಂದು ಆರಂಭವಾಗಲಿದೆ.
ಬೆಳಗ್ಗೆ ಗಣಪತಿ ಪೂಜೆ, ಸ್ವಸ್ತಿವಾಚನ, ಶುದ್ಧಪುಣ್ಯಾಹ, ಗಂಗಾಪೂಜೆ, ಮಹಾಮಂಗಳಾರತಿ, ಸಂಜೆ ಶುದ್ಧ ಪುಣ್ಯಾಹ, ಸ್ವಸ್ತಿವಾಚನ, ಅಂಕುರಾರ್ಪಣ, ಧ್ವಜಾರೋಹಣ, ನವಗ್ರಹ, ಗಣಪತಿ, ದುರ್ಗಾ, ಮೃತ್ಯುಂಜಯ ಪರಿವಾರ ದೇವತೆಗಳ ಕಲಶ ಸ್ಥಾಪನೆ, ಪ್ರಧಾನ ಕಲಶ ಸ್ಥಾಪನೆ, ವಾಸ್ತುಪೂಜೆ, ವಾಸ್ತುಹೋಮ ನಡೆಯಲಿವೆ.
ಜು.25ರಂದು ಯಾಗಶಾಲಾ ಪ್ರವೇಶ, ಪರ‌್ಯಗ್ನಿಕರಣ, ಅಗ್ನಿಪ್ರತಿಷ್ಠೆ, ಕಲಶಾರಾಧನೆ, ಮಹಾಗಣಪತಿ, ನವಗ್ರಹ, ದುರ್ಗಾ, ಮೃತ್ಯುಂಜಯಪೂರ್ವಕ ಪಂಚಸೂಕ್ತ ಹೋಮಗಳು, ಸಂಜೆ ದೇವಿಗೆ ಮಹಾಭಿಷೇಕ, ವಿಶೇಷ ಅಲಂಕಾರ, ಕಲಶಾರಾಧನೆ, ಉಕ್ತ ಹೋಮಗಳು, ಅಧಿದೇವತಾ ಹೋಮಗಳು, ಕಳಾವೃದ್ಧಿ ಹೋಮ, 26ರಂದು ಬೆಳಗ್ಗೆ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಕಲಶಾರಾಧನೆಯೊಂದಿಗೆ ಮಹಾ ಚಂಡಿಕಾ ಹೋಮ, ಪೂರ್ಣಾಹುತಿ, ರಕ್ಷಾಧಾರಣೆ, ಬಲಿಹರಣ, ಮಂಗಳದ್ರವ್ಯ ದರ್ಶನ, ಕದಲಿ ಛೇದನ, ಅಷ್ಠಾವಧಾನ, ಮಹಾನಿವೇದನೆ ಇನ್ನಿತರ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ ಎಂದು ದೇವಸ್ಥಾನ ಮಂಡಳಿ ತಿಳಿಸಿದೆ.