ಮಂಗಳೂರು ಜ್ಯುವೆಲ್ಲರಿ ಕೊಲೆ ಆರೋಪಿ ಸೆರೆ

IMG-20230302-WA0030
Published on

ಮಂಗಳೂರಿನ ಜ್ಯುವೆಲ್ಲರಿ ನೌಕರನನ್ನು ಇರಿದು ಕೊಂದ ಪ್ರಕರಣದ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಿರುವ ಮಾಹಿತಿ ಲಭಿಸಿದೆ. ಕೋಝಿಕ್ಕೋಡ್‌ನ ಚಟ್ಟನಾಡು ಎಂಬಲ್ಲಿನ ಪಿಪಿ ಶಿಫಾಸ್ (30) ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕಾಸರಗೋಡು ಪೊಲೀಸರ ನೆರವಿನಿಂದ ಕಾಸರಗೋಡು ಪೇಟೆಯಲ್ಲಿ ಬಂಧಿಸಲಾಗಿದೆ. ಆತನ ಕೈಯಿಂದ ಏರ್ ಗನ್, ಕೃತಕ ಕೂದಲು, ಪೇಪರ್ ಸ್ಪ್ರೇ ವಶಪಡಿಸಿಕೊಳ್ಳಲಾಗಿದೆ.

ಹಂಪನ ಕಟ್ಟೆಯ ಮಂಗಳೂರು ಜ್ಯುವೆಲ್ಲರಿಯ ಸಿಬ್ಬಂದಿ ರಾಘವೇಂದ್ರ ಆಚಾರ್ಯ (50) ಎಂಬವರನ್ನು ಕಳೆದ ತಿಂಗಳು ಇರಿದು ಕೊಲೆ ಮಾಡಲಾಗಿತ್ತು. ಯುವಕ ಮಾಸ್ಕ್ ಮತ್ತು ಟೋಪಿ ಹಾಕಿಕೊಂಡು ಜ್ಯುವೆಲ್ಲರಿ ಅಂಗಡಿಗೆ ಹೋಗಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಗಾಗಿ ಪೊಲೀಸರು ಒಂದು ತಿಂಗಳಿನಿಂದ ಹುಡುಕಾಟ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net