ಮಗದುಮ ಕಾರ್ಯ ಪ್ರೇರಣೆಯಾಗಲಿ

14BRG1
Published on

ಬೋರಗಾಂವ: ಪಪಂ ಸದಸ್ಯ ಅಭಯಕುಮಾರ ಮಗದುಮ ನೇತೃತ್ವದಲ್ಲಿ ಪ್ರತಿ ವರ್ಷ ಆರೋಗ್ಯ ತಪಾಸಣಾ ಉಚಿತ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಅವರ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಯುವ ಮುಖಂಡ ಉತ್ತಮ ಪಾಟೀಲ ಅಭಿಪ್ರಾಯಪಟ್ಟರು.

ಗ್ರಾಮದಲ್ಲಿ ಮಂಗಳವಾರ ಜೈಗಣೇಶ ಮತ್ತು ಗೌರಿ ಗಣೇಶ ಕೋ-ಆಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಯುವ ಮುಖಂಡ ಉತ್ತಮ ಪಾಟೀಲ ಚಾಲನೆ ನೀಡಿ ಮಾತನಾಡಿದರು.

ಅಭಯಕುಮಾರ ಮಗದುಮ ಮಾತನಾಡಿ, ಸಾಮಾಜಿಕ ಕ್ಷೇತ್ರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಮಧುಮೇಹ, ಹೃದ್ರೋಗ, ಚರ್ಮ ರೋಗ, ಕಣ್ಣಿನ ತಪಾಸಣೆ, ದಂತ ಪರೀಕ್ಷೆ ಮಾಡಲಾಯಿತು. 55ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. ಶಿಬಿರದಲ್ಲಿ 280ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ಭೂಪಾಲ ಮಗದುಮ, ಬಾಬಾಸೋ ವಠಾರೆ, ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಾಸವಾಡೆ, ಅಭಯಕುಮಾರ ಕರೋಲೆ, ರಾಜು ಮಗದುಮ, ಮನೋಜಕುಮಾರ ಪಾಟೀಲ, ಡಾ.ಶಂಕರ ಮಾಳಿ, ಪಂಚಾಯಿತಿ ಸಿಇಒ ಎಸ್.ಬಿ.ತೋಡಕರ, ವೈದ್ಯಾಧಿಕಾರಿ ವಿಲೋಲ ಜೋಶಿ, ಪಂಚಗಂಗಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಸಂಜೀವ ದೇಸಾಯಿ, ಮಹಾವೀರ ಚೌಗುಲೆ, ಪೀರಗೌಡ ಪಾಟೀಲ, ಅರುಣ ಬೋನೆ, ಸುರೇಶ ಖೋತ್, ಬಿ.ಜೆ.ಪಾಟೀಲ, ತೇಜಪಾಲ ಮಗದುಮ, ದಿಗಂಬರ ಕಾಂಬಳೆ, ಪ್ರದೀಪ ಮಾಳಿ, ಜಾವೇದ್ ಮಕಾಂದರ್, ಸಚಿನ ರೋಡ, ಅಮರ ಶಿಂಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net