ಕಂದಕಕ್ಕೆ ಸುರಿದಿರುವ ತ್ಯಾಜ್ಯ ತೆರವುಗೊಳಿಸಿ

4 RMN MGD p02
Published on

ಮಾಗಡಿ: ನಾಡಪ್ರಭು ಕೆಂಪೇಗೌಡರ ಕಾಲದ ಕೋಟೆ, ಕಂದಕ, ಬಯಲು ರಂಗಮಂದಿರ ರಕ್ಷಿಸಿ ಮುಂದಿನ ಪೀಳಿಗೆಗೆ ಸಾಕ್ಷಿಯಾಗಿ ಉಳಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.

ಪಟ್ಟಣದ ನಾಡಪ್ರಭು ಕೆಂಪೇಗೌಡರ ಕೋಟೆಯ ದಕ್ಷಿಣ ಭಾಗದ ಕಂದಕಕ್ಕೆ ಕಟ್ಟಡ ಅವಶೇಷಗಳ ತ್ಯಾಜ್ಯ, ಮಣ್ಣು ಸುರಿದಿರುವುದನ್ನು ಬುಧವಾರ ವೀಕ್ಷಿಸಿ ಮಾತನಾಡಿದರು.

ಕಂದಕಕ್ಕೆ ತ್ಯಾಜ್ಯ ಸುರಿಯುತ್ತಿದ್ದು, ಪುರಸಭೆ ಗಮನಹರಿಸದಿರುವುದು ತಪು್ಪ. ಕೂಡಲೇ ಕಂದಕಕ್ಕೆ ಸುರಿದಿರುವ ತ್ಯಾಜ್ಯ ತೆರವುಗೊಳಿಸಿ ಎಚ್.ಎಂ. ಕೃಷ್ಣಮೂರ್ತಿ ತಿಳಿಸಿದಂತೆ ತಡೆಗೋಡೆ ನಿರ್ವಿುಸಿ, ರೈಲಿಂಗ್ಸ್ ಅಳವಡಿಸಿ, ವಿದ್ಯುತ್ ದೀಪದ ವ್ಯವಸ್ಥೆ ಮಾಡಿ. ಸಂಜೆ ವೇಳೆ ಪಟ್ಟಣದ ಮಂದಿ ಕುಳಿತುಕೊಳ್ಳಲು ಮತ್ತು ವಾಯುವಿಹಾರ ಮಾಡಲು ಅನುಕೂಲ ಕಲ್ಪಿಸಿ ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಕೆಂಪೇಗೌಡರ ಸ್ಮಾರಕಗಳನ್ನು ಸಂರಕ್ಷಿಸಲು ನೀಲಿನಕ್ಷೆ ತಯಾರಿಸಲಾಗಿದೆ. ಹಂತ ಹಂತವಾಗಿ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿಪಡಿಸಲಾಗುವುದು. ಪಟ್ಟಣದಲ್ಲೂ ಮಾದರಿ ರಂಗಮಂದಿರ ನಿರ್ವಿುಸಲು ಸರ್ಕಾರದಿಂದ ವಿಶೇಷವಾಗಿ ಹಣ ಮಂಜೂರು ಮಾಡಿಸಲಾಗಿದೆ ಎಂದರು.

ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಮಾತನಾಡಿ, ಕಂದಕಕ್ಕೆ ತ್ಯಾಜ್ಯ ಸುರಿದಿರುವ ಬಗ್ಗೆ ಶಾಸಕರ ಗಮನಕ್ಕೆ ತಂದಾಗ ತಕ್ಷಣವೇ ಸ್ಪಂದಿಸಿ ಪರಿಶೀಲಿಸಿದ್ದಾರೆ. ತ್ಯಾಜ್ಯ ತೆರವುಗೊಳಿಸುವ ಭರವಸೆ ನೀಡಿದ್ದಾರೆ. ತಾತ್ಕಾಲಿಕವಾಗಿ ತಂತಿ ಬೇಲಿ ಹಾಕಿ ಸಿಸಿ ಕ್ಯಾಮರಾ ಅಳವಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದರು.

ನ.11ರಂದು ಅಧಿಕಾರಿಗಳ ಸಭೆ

ರಂಗನಾಥಸ್ವಾಮಿ ದೇವಾಲಯದ ಪೂರ್ವ ಭಾಗ ಕುಸಿಯುತ್ತಿದ್ದು ಅಭಿವೃದ್ಧಿಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಮುಂದಾಗಿದ್ದಾರೆ. ಇದಕ್ಕೆ ಬೇಕಾದ 4 ಕೋಟಿ ರೂ. ಹೆಚ್ಚುವರಿ ಅನುದಾನ ತರಲಾಗಿದೆ, ಒತ್ತುವರಿಯಾಗಿರುವ ಕೋಟೆ ಜಾಗವನ್ನು ಸರ್ವೆ ನಡೆಸಿ ತೆರವುಗೊಳಿಸಲಾಗುವುದು. ಈ ಸಂಬಂಧ ರ್ಚಚಿಸಲು ನ.11ರಂದು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net