ಅಶೋಕನ ಶಾಸನ ಆಧಾರಿತ ಕೃತಿ ಮಾಗಧ

2601KLB04
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?Intermittent clouds, icon:1, weatherInfo:102;temperature: 40;
Published on

ಕಲಬುರಗಿ: ದೇಶದ ಯಾವುದೇ ದಿಕ್ಕಿಗೆ ಹೋದರೂ ಅಶೋಕನ ಶಾಸನಗಳು ದೊರೆಯುತ್ತವೆ. ಇಡೀ ದೇಶವನ್ನೇ ಆಳಿದ ಕ್ಷಾತ್ರ ಪರಂಪರೆ ಇರುವ ವಂಶದ ರಾಜ ದಿಢೀರ್ ಶಸ್ತ್ರ  ಹೇಗೆ ಕೆಳಗಿಟ್ಟ ಎಂಬುದು ಅರ್ಥೈಸಿಕೊಳ್ಳಬೇಕು. ಅಶೋಕನ ಬಗ್ಗೆ ಕೇವಲ ಬೌದ್ಧ ಕೃತಿಗಳಷ್ಟೇ ಅಲ್ಲ ಆತನೇ ಬರೆಸಿರುವ ಶಾಸನಗಳನ್ನು ಆಧರಿಸಿ ಮಾಗಧ ಕಾದಂಬರಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕಾಂದಬರಿ ಲೇಖಕಿ ಸಹನಾ ವಿಜಯಕುಮಾರ ಹೇಳಿದರು.

ನಗರದ ಅನಂತರಾವ ದೇಶಮುಖ ಸಭಾಂಗಣದಲ್ಲಿ ಕಲಬುರಗಿ ಲಿಟರರಿ ಫೌಂಡೇಷನ್ ಹಾಗೂ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಐತಿಹಾಸಿಕ ಮಾಗಧ ಕಾದಂಬರಿ ಕುರಿತ ಸಂವಾದದಲ್ಲಿ ಮಾತನಾಡಿ, ಅಶೋಕನ ಶಾಸನಗಳನ್ನು ಪ್ರಾಕೃತ, ಸಂಸ್ಕೃತದ ಜ್ಞಾನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಆದರೆ ಅಶೋಕನ ಬಗ್ಗೆ ಇದುವರೆಗೆ ಬಹುತೇಕ ಕೃತಿಗಳು ಬೌದ್ಧ ಧರ್ಮ ಗ್ರಂಥಗಳನ್ನೇ ಅವಲಂಬಿಸಿದ್ದು, ಬೌದ್ಧ ಧರ್ಮಗ್ರಂಥಗಳು ತಮಗೆ ತೋಚಿದಂತೆ ಅಶೋಕನನ್ನು ತಿಳಿದುಕೊಂಡಿವೆ ಎಂದು ಹೇಳಿದರು.

ಹಲವು ಗ್ರಂಥ, ಗೊಂದಲಗಳ ಮಧ್ಯೆ ಅಶೋಕನೇ ಬರೆಸಿದ ಶಾಸನಗಳನ್ನು ಗಟ್ಟಿಯಾಗಿ ಅರ್ಥೈಸಿಕೊಂಡು ಆಳವಾಗಿ ಅಧ್ಯಯನ ಮಾಡಿ, ಮಾಗಧದಲ್ಲಿ ಉಲ್ಲೇಖಿಸಲಾಗಿದೆ. ಅಶೋಕ ಇಬ್ಬರು ಮಕ್ಕಳನ್ನು ಸಿಂಹಳಕ್ಕೆ ಕಳುಹಿಸಿದ ಎಂಬುದು ಯಾವುದೇ ಶಾಸನದಲ್ಲಿ ಇಲ್ಲ. ಶಿಲ್ಪ, ಶಾಸನಗಳಲ್ಲಿ ಸಿಗದಿರುವುದು ಎಲ್ಲಿ ಸಿಗುತ್ತದೆ? ಕೇವಲ ಬೌದ್ಧ ಧರ್ಮಗ್ರಂಥಗಳನ್ನು ಆಧಾರ ಇಟ್ಟುಕೊಂಡು ಹೇಗೆ ಸಾಗುವುದು ಎಂದು ಹೇಳಿದರು.

ನೂತನ ವಿದ್ಯಾಲಯದ ನಿರ್ದೇಶಕ ಪ್ರೊ.ಗೋವಿಂದ ಪೂಜಾರ, ಪ್ರಾಚಾರ್ಯ ಡಾ.ದಯಾನಂದ ಶಾಸ್ತ್ರಿ, ಡಾ.ಮಲ್ಲಿನಾಥ ತಳವಾರ ಇತರರಿದ್ದರು. ರೋಹಿಣಾಕ್ಷ ಶಿರ್ಲಾಲು, ಡಾ.ಶಿವಕುಮಾರ ಬೆಳ್ಳಿ ನಿರೂಪಣೆ ಮಾಡಿದರು.

ರಾಜರಿಗೆ ಬುದ್ಧ ಶಸ್ತ್ರ ತ್ಯಾಗ ಹೇಳಿಲ್ಲ: ಜೀವನವಿಡೀ ಕ್ಷಾತ್ರೀಯ ರಾಜರ ಆಶ್ರಯದಲ್ಲೇ ಇದ್ದ ಬುದ್ಧ ಎಂದಿಗೂ ಶಸ್ತç ತ್ಯಾಗವನ್ನು ಯಾವುದೇ ರಾಜನಿಗೂ ಹೇಳಿಲ್ಲ. ಬುದ್ಧನ ಅತ್ಯಾಪ್ತ ರಾಜ ಬಿಂಬಿಸಾರನು ಯೋಧರಿಗೆ ದೀಕ್ಷೆ ನೀಡದಂತೆ ಮನವಿ ಮಾಡಿದ್ದಾಗ ಅದನ್ನು ಬುದ್ಧ ಕೈ ಬಿಟ್ಟಿದ್ದ. ಕಾರಣ ಆತನ ಬುದ್ಧ ವಿಹಾರಗಳಿಗೆ ರಾಜಾಶ್ರಯದ ಅಗತ್ಯವಿತ್ತು. ರಾಜನಾಗಿದ್ದ ಬಿಂಬಿಸಾರ ತಂದೆಯನ್ನು ಬಂಧನದಲ್ಲಿಟ್ಟಾಗ ಬುದ್ಧ ಅದನ್ನು ವಿರೋಧಿಸಲಿಲ್ಲ. ಬುದ್ಧ ಹಿಂಸೆ ವಿರೋಧಿ ಎನ್ನುವುದು, ಅಹಿಂಸೆಯಿAದ ದೇಶಕ್ಕೆ ಸ್ವಾತಂತ್ರ್ಯ  ಬಂದು ಎಂಬಷ್ಟೇ ಸುಳ್ಳು. ೧೯೬೨ರಲ್ಲಿ ಚೀನಾ ನಮ್ಮ ಭಾರತವನ್ನು ಸೋಲಿಸುವವರೆಗೆ ಅದು ಅರ್ಥವಾಗಲಿಲ್ಲ ಎಂದು ಸಹನಾ ವಿಜಯಕುಮಾರ ಹೇಳಿದರು.

ವಿದೇಶದ ಫೆಮಿನಿಸಂ ಹೆಸರಲ್ಲಿ ಭಾರತದಲ್ಲಿ ಏನೇನೋ ಬಿತ್ತುತ್ತಿದ್ದಾರೆ. ಪ್ರಾಚೀನ ಭಾರತದಲ್ಲಿ ಸ್ತ್ರೀ ಸಬಲೀಕರಣಕ್ಕೆ ಸದಾ ಸಹಕಾರ, ರಕ್ಷಣೆ ಇತ್ತು. ಎಲ್ಲ ಬಣಗಳ ಬಗ್ಗೆ ಅಧ್ಯಯನ ಮಾಡಬೇಕು. ಮಾಗಧ ಕಾದಂಬರಿ ನಾಲ್ಕು ವಿಭಾಗದಲ್ಲಿದ್ದು, ಸುದೀರ್ಘ ಎನಿಸುವುದಿಲ್ಲ. | ಸಹನಾ ವಿಜಯಕುಮಾರ ಕಾಂದಂಬರಿಕಾರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net