ಎಪ್ರಿಲ್​ 9 ರಿಂದ 13ರವರೆಗೆ ಪೆರ್ಣಂಕಿಲದಲ್ಲಿ 30ನೇ ಮಾಧ್ವತತ್ವಜ್ಞಾನ ಸಮ್ಮೇಳನ

udp-30-pejavara
Published on

ಉಡುಪಿ: ಪೇಜಾವರ ಮಠ, ಅಖಿಲ ಭಾರತ ಮಾಧ್ವ ಮಹಾಮಂಡಲ, ಪೂರ್ಣಪ್ರಜ್ಞ ವಿದ್ಯಾಪಿಠ ಪ್ರತಿಷ್ಠಾನ ಹಾಗೂ ಅನೇಕ ಸಂ ಸಂಸ್ಥೆಗಳ ಆಶ್ರಯದಲ್ಲಿ ಎ.9ರಿಂದ 13ರವರೆಗೆ ಪೆರ್ಣಂಕಿಲ ಕ್ಷೇತ್ರದಲ್ಲಿ 30ನೇ ಮಾಧ್ವ ತತ್ವಜ್ಞಾನ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪೆರ್ಣಂಕಿಲ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೀರ್ತಿಶೇಷ ಶ್ರೀ ವಿಶ್ವೇಶ ತೀರ್ಥ ಶ್ರೀಗಳು ಪ್ರತಿ 2 ವರ್ಷಕ್ಕೊಮ್ಮೆ ತತ್ವಜ್ಞಾನ ಸಮ್ಮೇಳನವನ್ನು ನಡೆಸುತ್ತಿದ್ದರು. ಅವರು ವೃಂದಾವನವಾದ ಬಳಿಕ 2ನೇ ಸಮ್ಮೇಳನ ಹಾಗೂ ಪೂರ್ಣಪ್ರಜ್ಞ ವಿದ್ಯಾಪಿಠದ ಟಿಕೋತ್ಸವವೂ ಪೆರ್ಣಂಕಿಲದಲ್ಲಿ ನಡೆಯಲಿದೆ. ಜೊತೆಗೆ ಮಧ್ವಾಚಾರ್ಯರು ಭೇಟಿ ನೀಡಿದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಭಕ್ತಿರಥ ಯಾತ್ರೆ, ವಿಷ್ಣು ಸಹಸ್ರ ನಾಮ, ರಾಮತಾರಕ ಮಂತ್ರಜಪಯಜ್ಞಗಳ ಸಮಾರೋಪ ಸಮಾರಂಭ, ಸಂತ ಸಮಾಗಮ ಜರಗಲಿದೆ ಎಂದು ಮಾಹಿತಿ ನೀಡಿದರು.

ಪ್ರಯಾಗದಲ್ಲಿ ಜನರೂ ತಾಳ್ಮೆ ವಹಿಸಬೇಕು

ಪ್ರಯಾಗದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಅಭೂತಪೂರ್ವ ವ್ಯವಸ್ಥೆ ಮಾಡಲಾಗಿದೆ. ದೇಶ&ವಿದೇಶಗಳಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ. ಹೀಗಾಗಿ ಜನರು ತಾಳ್ಮೆ ವಹಿಸಬೇಕು. ಇದರಿಂದ ಅಹಿತಕರ ಟನೆ ನಡೆಯದಂತೆ ತಡೆಯಲು ಸಾಧ್ಯ. ರಾಜಕೀಯ ಪಕ್ಷಗಳು ಮನಭೇದ ಮರೆತು ಕುಂಭಮೇಳದ ಯಶಸ್ಸಿಗೆ ಒಗ್ಗೂಡಬೇಕು ಎಂದು ಹೇಳಿದರು. ರ್ಖಗೆ ಹೇಳಿಕೆ ಬಾಲಿಶವಾಗಿದ್ದು, ಪುಣ್ಯ ಕ್ಷೇತ್ರದಲ್ಲಿ ಸ್ನಾನ ಮಾಡುತ್ತಿರುವ ಕೋಟ್ಯಾಂತರ ಮಂದಿ ಮೂರ್ಖರು ಎಂಬುದಾಗಿ ಹೇಳಿದಂತಾಗುತ್ತದೆ ಎಂದರು.

ಸನಾತನ ಬೋರ್ಡ್​ ಅಗತ್ಯ

ಪ್ರಯಾಗದಲ್ಲಿ ನಡೆದ ಸಂತ ಸಮಾವೇಶದಲ್ಲಿ ಹಿಂದೂ ಸಂವಿಧಾನ ಬಗ್ಗೆ ಚರ್ಚೆ ನಡೆದಿರುವ ಮಾಹಿತಿ ಇಲ್ಲ. ಆದರೆ ದೇವಾಲಯಗಳನ್ನು ಕಪಿಮುಷ್ಟಿಯಿಂದ ಹೊರತೆಗೆಯಲು ಸನಾತನ ಬೋರ್ಡ್​ ರಚಿಸಬೇಕು ಎಂಬ ಆಗ್ರಹವಿದೆ. ಸರ್ಕಾರಿ ದೇವಸ್ಥಾನಗಳ ಜೀಣೋರ್ದ್ಧಾರಕ್ಕೆ ಪ್ರಯತ್ನ ನಡೆಯುತ್ತಿಲ್ಲ. ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ. ಕಾಣಿಕೆ ಹಣ ಸದ್ವಿನಿಯೋಗವಾಗುತ್ತಿಲ್ಲ ಎಂಬ ಆಕ್ಷೇಪಗಳಿವೆ. ದೇವಸ್ಥಾನದಿಂದ ಊರಿಗೊಂದು ಶಾಲೆ, ಆಸ್ಪತ್ರೆ ನಿರ್ಮಾಣವಾಗಬೇಕು ಎಂದರು.

ಪೆರ್ಣಂಕಿಲ ಮಹಾಲಿಂಗೇಶ್ವರ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ತತ್ವಜ್ಞಾನ ಸಮ್ಮೇಳನದ ವಿಜ್ಞಾನಪನಾ ಪತ್ರವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ವಿದ್ವಾನ್​ ಹರಿದಾಸ ಭಟ್​, ಕೋಶಾಧಿಕಾರಿ ಶ್ರೀಶ ನಾಯಕ್​, ಸುಬ್ರಹ್ಮಣ್ಯ ಭಟ್​, ಪೇಜಾವರ ಮಠದ ದಿವಾನ್​ ರುರಾಮ ಆಚಾರ್ಯ, ಪ್ರಮುಖರಾದ ಪ್ರಸನ್ನ ಆಚಾರ್ಯ, ಡಾ. ಗೋಪಾಲಾಚಾರ್ಯ, ಡಾ. ಸಗ್ರಿ ಆನಂದತೀರ್ಥ ಆಚಾರ್ಯ, ಸಂದೀಪ ಮಂಜ, ಅನಂತ ಸಾಮಗ, ಉಮೇಶ್​ ನಾಯಕ್​, ಪದ್ಮಾ, ಕೃಷ್ಣ, ವಾಸುದೇವ ಭಟ್​ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net