ಹುಬ್ಬಳ್ಳಿಯಲ್ಲಿ ‘ಮ್ಯಾಡ್ಸ್ ಮೀಟ್-2ಕೆ25’ ಉತ್ಸವ

New PM 2 New
Published on

ಹುಬ್ಬಳ್ಳಿ: ಇಲ್ಲಿನ ಕೆಎಲ್​ಇ ಐಎಂಎಸ್​ಆರ್ ಎಂಬಿಎ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ‘ಮ್ಯಾಡ್ಸ್ ಮೀಟ್-2ಕೆ25’ ಅನ್ನು ಮೇ 23 ಹಾಗೂ 24ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೆಎಲ್​ಇ ಐಎಂಎಸ್​ಆರ್ ನಿರ್ದೇಶಕ ಡಾ. ರಾಜೇಂದ್ರಪ್ರಸಾದ ಹನಗಂಡಿ, ಪದವಿ ವಿದ್ಯಾರ್ಥಿಗಳ ಕೌಶಲ, ಉದ್ಯಮಶೀಲ ಪ್ರತಿಭೆ ಅನಾವರಣಗೊಳಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ ಎಂದರು.

2014ರಿಂದ 2016, 2021ರಿಂದ 2024ರಲ್ಲಿ ಪ್ರತಿ ವರ್ಷ ಈ ಉತ್ಸವ ಏರ್ಪಡಿಸಲಾಗಿತ್ತು. 20 ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡದಲ್ಲಿ ಐವರು ವಿದ್ಯಾರ್ಥಿಗಳು ಇರುವರು. ಕರ್ಟನ್ ರೈಸರ್, ರೈಸಿಂಗ್ ಪಲಾಡಿಸ್, ಮ್ಯಾಚ್​ವಿಜ್, ನೋವಸ್- ದಿ ಸೋಷಿಯಲ್ ಎಂಟರ್​ಪ್ರಿನರ್, ಸ್ಟಾರ್ಟಾಥಾನ್ ಎಂಬ ಐದು ಸುತ್ತುಗಳನ್ನು ರಚಿಸಲಾಗಿದೆ. ಕರ್ನಾಟಕ ಹಾಗೂ ಹೊರ ರಾಜ್ಯಗಳ ಪದವಿ ಕಾಲೇಜುಗಳ ತಂಡಗಳಲ್ಲಿ ಈ ಉತ್ಸವ ಆಸಕ್ತಿ ಮೂಡಿಸಿದೆ ಎಂದು ಹೇಳಿದರು.

23ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಮ್ಯಾಡ್ಸ್​ಮೀಟ್-2ಕೆ25 ಉದ್ಘಾಟನಾ ಸಮಾರಂಭಕ್ಕೆ ಉದ್ಯಮಿ ಮಹೇಂದ್ರನ್ ಕಥಿರಾಸನ್ ಹಾಗೂ ವಿಘ್ನೇಶ್ವರ ವಿ.ಡಬ್ಲ್ಯು ಅತಿಥಿಗಳಾಗಿ ಪಾಲ್ಗೊಳ್ಳುವರು. ಕೆಎಲ್​ಇ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು.

24ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಚಲನಚಿತ್ರ ಕಲಾವಿದ ಶ್ರೀಧರ ಯಡ್ರಾವಿ, ಕಲಾವಿದೆ ನಿಖಿತಾ ಸ್ವಾಮಿ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದ ಸಂಧ್ಯಾ ಗಿರೀಶ ಅತಿಥಿಗಳಾಗಿದ್ದು, ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಸಿ. ಮೆಟಗುಡ್ಡ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಡಾ. ಅಮಿತ ಅಂಗಡಿ ಹಾಗೂ ಪ್ರೊ. ರವಿ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net