ಎಂಡಿಎಂಎ ಸಾಗಾಟ ಆರೋಪಿ ಬಂಧನ

arrested
Published on

ಮಂಗಳೂರು: ನಗರದ ಬೋಳೂರು ಸಮೀಪ ಕಾರಿನಲ್ಲಿ ಅಕ್ರಮವಾಗಿ ಎಂಡಿಎಂಎ ಸಾಗಾಟ ಮಾಡುತ್ತಿದ್ದಾಗ ಆರೋಪಿಯೊಬ್ಬನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.


ದೇರಳಕಟ್ಟೆ ಮದನಿನಗರ ನಿವಾಸಿ ರಾಜ್ (26) ಬಂಧಿತ ಆರೋಪಿ.


ಸೆ.7ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ ಕೊಣಾಜೆ ಕಡೆಯಿಂದ ನಂತೂರು, ಕೊಟ್ಟಾರ ಚೌಕಿ ಮಾರ್ಗವಾಗಿ ಕಾರಿನಲ್ಲಿ ಆರೋಪಿ ಮಾದಕ ವಸ್ತು ವನ್ನು ವಶದಲ್ಲಿರಿಸಿಕೊಂಡು ಬಂದು ಮಂಗಳೂರಿನ ಅಶೋಕನಗರದ ಕಾಲೇಜು ಪರಿಸರದಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲು ತರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೋಳೂರು ಗ್ರಾಮದ ಈರಿ ಎಂಬಲ್ಲಿ ಕಾರನ್ನು ಅಡ್ಡಗಟ್ಟಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯಿಂದ ಮೊಬೈಲ್ ೆನ್, ಎಂಡಿಎಂಎ, ಡಿಜಿಟಲ್ ತೂಕ ಮಾಪನ -1 ಸೇರಿದಂತೆ 15 ಸದ್ರಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net