

ಮುನವಳ್ಳಿ: ಸಮೀಪದ ಮದ್ಲೂರ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ರ್ನಿಣಯ ಮಂಡಿಸಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆಗೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಲ್ಲಿ ಅಧ್ಯಕ್ಷರಾಗಿ ಲಕ್ಷ$್ಮಣ ಹೊಟ್ಟಿನವರ ಅವಿರೋಧವಾಗಿ ಆಯ್ಕೆಗೊಂಡರು. ಒಟ್ಟು 18 ಸದಸ್ಯರ ಪೈಕಿ 13 ಸದಸ್ಯರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. 5 ಸದಸ್ಯರು ಗೈರಾಗಿದ್ದರು.
ಗ್ರಾಪಂ ಉಪಾಧ್ಯಕ್ಷೆ ಮಹಾದೇವಿ ಬಾರ್ಕಿ, ಗ್ರಾಪಂ ಸದಸ್ಯರಾದ ಸೋಮಪ್ಪ ಕಲ್ಲೋಳಿ, ಸಂಗವ್ವ ಕುರಿ, ಶಿವಮ್ಮ ಸೊಪ್ಪಡ್ಲ, ಅನಿತಾ ಸುಣಗಾರ, ಲಕ್ಷಿ$್ಮ ಹೊಟ್ಟಿನ್ನವರ, ದೊಡ್ಡವ್ವ ನಾಗನೂರ, ಫಕೀರವ್ವ ಹೂಲಿ, ನಾಗವ್ವ ಲಕ್ಕಪ್ಪನ್ನವರ, ಕರಿಯಪ್ಪ ಪೂಜೇರ, ಕಸ್ತೂರಿ ಬೆನಕಟ್ಟಿ, ಅಶೋಕ ಯರಝರ್ವಿ ಭಾಗವಹಿಸಿದ್ದರು. ಚುನಾವಣೆ ಅಧಿಕಾರಿಯಾಗಿ ಕೃಷಿ ಸಹಾಯಕ ನಿರ್ದೇಶಕ ಶಿವಪ್ರಕಾಶ ಪಾಟೀಲ, ಸಹಾಯಕರಾಗಿ ಪಿಡಿಒ ರಾವೇಂದ್ರಕುಮಾರ್ ಎಸ್.ಪಿ., ಕಾರ್ಯದರ್ಶಿ ಎಸ್.ಎನ್.ಕಡಹಳ್ಳಿ, ವಿ.ಎಂ.ದಳವಾಯಿ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಲಕ್ಷ$್ಮಣ ಹೊಟ್ಟಿನವರ ಮಾತನಾಡಿ, ಶಾಸಕ ವಿಶ್ವಾಸ ವೈದ್ಯ ಮಾರ್ಗದರ್ಶನದಲ್ಲಿ ಮದ್ಲೂರ ಹಾಗೂ ಬೆನಕಟ್ಟಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಅವಿರೋಧ ಆಯ್ಕೆಯಾಗುತ್ತಿದ್ದಂತಯೇ ಬೆಂಬಲಿಗರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರು. ಜಿಪಂ ಮಾಜಿ ಸದಸ್ಯ ಫಕೀರಪ್ಪ ಹದ್ದನ್ನವರ, ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವನ್ನವರ, ಸಿದ್ಧಾರೂಢ ಬಿಲಕಂಚಿ, ರಾಮಚಂದ್ರ ಪಟಾತ, ಫಕೀರಪ್ಪ ಹಟ್ಟಿ, ಉದಯ ನರಿ, ಗುಡುಸಾಬ್ ದೊಡಮನಿ, ಯಲ್ಲಪ್ಪ ನರಿ, ಪಡೆಪ್ಪ ನರಿ, ಸಿದ್ದಪ್ಪ ಕುರಿ, ಶಂಕರೆಪ್ಪ ಕುರಿ, ವಿಠ್ಠಲ ನರಿ, ಮಲ್ಲಪ್ಪ ಶೆರೆಪ್ಪನ್ನವರ, ಪ್ರಭು ನಾಗನೂರ, ವಿಠ್ಠಲ ಪಚ್ಚಿ, ಪಂಚಪ್ಪ ಕುಸಲಿ, ಬಸವರಾಜ ಸುಣಗಾರ ಇತರರು ಇದ್ದರು.