

ಹುಬ್ಬಳ್ಳಿ: ಇಲ್ಲಿಯ ಮಡಿವಾಳರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ವಾಷಿರ್ಕ ಸರ್ವ ಸಾಧಾರಣ ಸಭೆಯು ಭಾನುವಾರ ಸೊಸೈಟಿ ಆವರಣದಲ್ಲಿ ಜರುಗಿತು.
ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೊಸೈಟಿ ಅಭಿವೃದ್ಧಿಗೆ ಸಲಹೆ ಸೂಚನೆ ನೀಡಿದರು.
ಕಾರ್ಯದರ್ಶಿ ನವೀನಕುಮಾರ ಮಡಿವಾಳರ, ಸೊಸೈಟಿ ಆಯವ್ಯಯ ಮಂಡಿಸಿ, ಮುಂದಿನ ಅಭಿವೃದ್ಧಿ ಕಾರ್ಯಕ್ರಮ ಪ್ರಕಟಿಸಿದರು. ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಸತೀಶ ಕೌತಾಳ ವಹಿಸಿದ್ದರು.
ಸೊಸೈಟಿ ಉಪಾಧ್ಯಕ್ಷ ಸಣ್ಣಪ್ಪ ಮಡಿವಾಳರ, ನಿರ್ದೇಶಕರಾದ ರಾಮು ಯಾದಗಿರಿ, ಕಾಶಿನಾಥ ಕೌತಾಳ, ಮಹೇಶ ಮಡಿವಾಳರ, ಶ್ರೀಕಾಂತ ಮಡಿವಾಳರ, ವಿಶ್ವನಾಥ ರಾಂಪೂರ, ಸಂದೀಪ ಹುಣಚಿ, ಕಸ್ತೂರಿ ಕೌತಾಳ, ಕಲಾವತಿ ಮಡಿವಾಳರ, ಹಿರಿಯ ಸದಸ್ಯರಾದ ಹನುಮಂತಪ್ಪ ಮಡಿವಾಳರ, ಗಂಗಾಧರ ಮಡಿವಾಳರ, ದಾವಲಸಾಬ ಅಗಸರ, ವಿಷ್ಣು ಕಟ್ಟಿಮನಿ, ವಿಶ್ವನಾಥ ಕೌತಾಳ, ರಮೇಶ ನೀಲಕಂಠಿ, ಮುಂತಾದವರು ಉಪಸ್ಥಿತರಿದ್ದರು.