ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ

dj dvg madivala prathiba
Published on

ದಾವಣಗೆರೆ: ಸಮುದಾಯದಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಉಜ್ವಲ ಭವಿಷ್ಯ ರೂಪಿಸಬಹುದಾಗಿದೆ. ದುಡ್ಡೇ ದೊಡ್ಡಪ್ಪ ಎನ್ನುವ ಕಾಲವೊಂದಿತ್ತು. ಈಗ ವಿದ್ಯೆ ಅವರಪ್ಪ ಎನ್ನುವಂತಾಗಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.

ಇಲ್ಲಿನ ವಿನೋಬ ನಗರದಲ್ಲಿರುವ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಹಾಗೂ ಮಡಿಕಟ್ಟೆ

ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೈಕ್ಷಣಿಕವಾಗಿ ಸಬಲರಾಗಿದ್ದರೇ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನಗಳಿಗೆ ಏರಬಹುದು.

ಇದರೊಂದಿಗೆ ಸಮುದಾಯಕ್ಕೆ ಮಾತ್ರವಲ್ಲದೇ ರಾಜ್ಯ, ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗಲಿದೆ ಎಂದು ತಿಳಿಸಿದರು.

ಮಡಿವಾಳರು ಸಣ್ಣ ಸಮುದಾಯವಾದರೂ ಸಹ ಜನರ ಬಟ್ಟೆಗಳನ್ನು ಶುಭ್ರ ಮಾಡುವಂತಹ ಸ್ವಚ್ಛ ಸಮಾಜವಾಗಿದೆ. ಬಟ್ಟೆ ಶುಭ್ರ ಮಾಡುವ ಜತೆಯಲ್ಲಿ ಶೈಕ್ಷಣಿಕವಾಗಿ ಮುಂದೆ ಬರಬೇಕೆಂದು ಸಲಹೆ ನೀಡಿದರು.

ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಜಿ.ಉಮೇಶ್ ಮಾತನಾಡಿ, ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಸರ್ಕಾರಗಳಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ.

ಆದರೆ ಯಾವುದೇ ಪ್ರಯೋಜನವಾಗಿಲ್ಲ. ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವನ್ನು ಮೇಲಕ್ಕೆತ್ತಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ಮಾಚಿದೇವ ಸಮುದಾಯ ಭವನದ ಮುಂದಿನ ಮುಖ್ಯ ರಸ್ತೆಗೆ ಶರಣ ಮಡಿವಾಳ ಮಾಚಿದೇವ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ಈ ಹೆಸರು ಇಡಲು ಕೆಲವು ಸ್ವಹಿತಾಸಕ್ತಿ, ವ್ಯಕ್ತಿಗತವಾಗಿ ಇದ್ದವರು ವಿರೋಧಿಸಿದ್ದರು. ಆದರೂ ರಸ್ತೆಗೆ ಹೆಸರಿಟ್ಟಿದ್ದು ಒಳ್ಳೆಯ ನಿರ್ಧಾರವಾಗಿದೆ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಜಡೇಸಿದ್ಧ ಯೋಗೀಶ್ವರ ಮಠದ ಶಿವಾನಂದ ಸ್ವಾಮೀಜಿ ಹಾಗೂ ರಾಣೇಬೆನ್ನೂರು ವಿರಕ್ತ ಮಠದ ಗುರು ಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಸಂಘದ ಅಧ್ಯಕ್ಷ ಎಂ.ನಾಗೇಂದ್ರಪ್ಪ, ಓಂಕಾರಪ್ಪ, ಜಿ.ಬಿ.ವಿನಯ್ ಕುಮಾರ್, ವನಜಾಕ್ಷಮ್ಮ ಪಾಂಡುರಂಗಪ್ಪ, ನೇತ್ರಾವತಿ, ಜಿ.ಎಚ್.ನಾಗರಾಜ್,

ಹುಲಿಕಟ್ಟೆ ರಾಮಚಂದ್ರಪ್ಪ, ಕಿಶೋರ್ ಕುಮಾರ್, ಪರಶುರಾಮ, ನಾಗಮ್ಮ, ಬಸವರಾಜ್, ಬಾತಿ ಶಂಕರ್, ಡೈಮಂಡ್ ಮಂಜುನಾಥ್, ಎ.ಮಲ್ಲಪ್ಪ,

ಶಿವಾನಂದ, ಆರ್.ಎನ್.ಧನಂಜಯ, ಸುರೇಶ್ ಕೋಗುಂಡೆ, ಪತ್ರಕರ್ತ ಎಂ.ವೈ.ಸತೀಶ್, ದುಗ್ಗಪ್ಪ, ಪೂಜಾರ್ ಅಂಜಿನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net