ಕಾಯಕ ನಿಷ್ಠೆಯಿಂದ ಬದುಕುವ ಸಮಾಜ ಮಡಿವಾಳ ಸಮುದಾಯ

Madiwala community, a society that lives by Kayak loyalty
Published on

ಬೀಳಗಿ:ಕಾಯಕ ನಿಷ್ಠೆಯಿಂದ ಬದುಕುವ ಸಮಾಜ ಮಡಿವಾಳ ಸಮುದಾಯ. ಯಾವುದೇ ಆಸೆ ಪಡದೆ ತಮ್ಮ ಮೂಲ ವೃತ್ತಿ ಮಾಡುತ್ತಿದೆ. ಈ ಸಮಾಜದ ಅಭಿವೃದ್ಧಿಗೆ ಮೇಲು, ಕೀಳು ಎನ್ನದೆ ಇತರರು ಗೌರವಿಸುವ ಕೆಲಸ ಆಗಬೇಕು ಎಂದು ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರುಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಡಿವಾಳ ಸಮಾಜದ ಜಿಲ್ಲಾ ಮಟ್ಟದ ಬೃಹತ್​ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.12 ಶತಮಾನದಲ್ಲಿ ಬಸವಣ್ಣನವರು ಕಾಯಕ ವೃತ್ತಿಯಲ್ಲಿ ಮೇಲು ಕೀಳು ಎಂಬುದು ಇಲ್ಲ. ಎಲ್ಲಾ ಕಾಯಕಗಳಿಗೆ ಸಮಾನವಾದ ಬೆಲೆ ಸಿಗಬೇಕು. ಗೌರವದಿಂದ ಕಾಣಬೇಕು ಎಂದು ಸಾರಿ ಸಾರಿ ಹೇಳಿದ್ದರು. ಮಡಿವಾಳ ಸಮಾಜದವರು ಸ್ವಚ್ಛ, ಶುಭ್ರತೆ ಕಾಯಕ ಮಾಡುತ್ತಿದ್ದಾರೆ. ಈ ಸಮಾಜದ ಜನರು ಧಾರ್ಮಿಕ ಪದ್ಧತಿಯಲ್ಲಿ ಉನ್ನತ ಸ್ಥಾನ ಪಡೆದವರು. ಲಿಂಗ ಪೂಜೆ, ಲಿಂಗಾರಾಧನೆಯಿಂದ ನಿರಂತರವಾಗಿ ತಮ್ಮ ಕಾಯಕದಲ್ಲಿ ನೆಮ್ಮದಿ, ಸಂತೋಷ ಪಡೆಯುವಂತಾಗಬೇಕು ಎಂದರು.

ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಹಲವಾರು ವರ್ಷಗಳಿಂದ ನಿರಂತರ ಕಾಯಕದಲ್ಲಿರುವ ಮಡಿವಾಳ ಸಮಾಜವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಬಲತೆ ಸಾಧಿಸಬೇಕು. ಇಂದು ತಮ್ಮ ಕಾಯಕಕ್ಕೆ ಸಾಕಷ್ಟು ಸವಾಲುಗಳು ಎದುರಾಗಿವೆ. ಹೀಗಾಗಿ, ಸಮಾಜದ ಮುಖ್ಯವಾಹಿನಿಗೆ ಬರಲು ಹೊಸ ಪ್ರಯತ್ನ ನಡೆಸಬೇಕು. ಸಮಾಜದ ಭವನ ನಿರ್ಮಾಣಕ್ಕೆ ಬೀಳಗಿ ಪಟ್ಟಣದಲ್ಲಿ ನಿವೇಶನ ಮತ್ತು 20 ಲ ರೂ. ಅನುದಾನ ಕೂಡಲೇ ನೀಡಲಾಗುವುದು ಎಂದು ೂಷಣೆ ಮಾಡಿದರು.

ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಟಕದ ಅಧ್ಯ ಆರ್​.ರುಕೌಟಿಲ್ಯ ಮಾತನಾಡಿ, ಮಡಿವಾಳ ಸಮಾಜವು ಬಹಳಷ್ಟು ಹಿಂದುಳಿದಿದೆ. ರಾಜ್ಯ ಸರ್ಕಾರ ಎಸ್ಸಿ ಪಟ್ಟಿಯಲ್ಲಿ ಸೇರಿಸಲು ಹಿದೇಟು ಹಾಕುತ್ತಿದೆ. ಇದರಿಂದ ನಮ್ಮ ಜಮಾಜಕ್ಕೆ ಅನ್ಯಾಯವಾಗಲಿದೆ. ಸರ್ಕಾರ ಕೊಡಲೇ ಎಸ್ಸಿ ಮೀಸಲಾತಿಯಲ್ಲಿ ಸೇರಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.ವಿಧಾನ ಪರಿಷತ್​ ಸದಸ್ಯ ಎಚ್​.ಆರ್​.ನಿರಾಣಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಮುಂದೆ ಬರಬೇಕಾದರೆ ತಮ್ಮ ಮಕ್ಕಳಿಗೆ ಉನ್ನತ ಹಾಗೂ ಮೌಲ್ಯಯುತ ಶಿಣ ನೀಡಬೇಕು. ಇದರಿಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಣಿಕ ರಂಗದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಚಿತ್ರದುರ್ಗ ಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ, ಶಿರೂರು ಮಹಾಂತ ತೀರ್ಥ ಬಸವಲಿಂಗ ಶ್ರೀಗಳು, ತಂಗಡಗಿ ಮಹಾಸಂಸ್ಥಾನಮಠದ ಅನ್ನದಾನಿ ಭಾರತಿ ಅಪ್ಪಣ್ಣ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಂದ ಮಹಿಳಾ ರಾಜ್ಯಾಧ್ಯ ವಿಜಯಲಕ್ಷಿ$್ಮ ಮಡಿವಾಳರ, ಜಿಲ್ಲಾಧ್ಯ ಗೋಪಿ

ಬೀಳಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಡಿವಾಳರ ಬೃಹತ್​ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಟಕದ ಅಧ್ಯಕ್ಷ ಆರ್​.ರುಕೌಟಿಲ್ಯ ಉದ್ಘಾಟಿಸಿದರು. ಗುರುಮಹಾಂತ ಶ್ರೀಗಳು. ಶಾಸಕ ಜೆ.ಟಿ.ಪಾಟೀಲ, ವಿ.ಪ ಸದಸ್ಯ ಎಚ್​.ಆರ್​.ನಿರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net