ಮಡಿವಾಳೇಶ್ವರರ ಮಹಿಮೆ ಅಪಾರ

6blh3
ಮಡಿವಾಳೇಶ್ವರ ಮಠದ ಶಿಲಾಮಠವನ್ನು ಜಯೇಂದ್ರಪುರಿ ಮಹಾರಾಜರು ಉದ್ಘಾಟಿಸಿದರು. ಡಾ.ಸಿದ್ದರಾಮ ಶ್ರೀಗಳು, ಮಡಿವಾಳೇಶ್ವರ ಸ್ವಾಮೀಜಿ, ಗಂಗಾಧರ ಸ್ವಾಮೀಜಿ ಇತರರಿದ್ದರು.
Published on

ಬೈಲಹೊಂಗಲ : ಪಟ್ಟಣದ ಪವಾಡ ಪುರುಷ ಗುರು ಮಡಿವಾಳೇಶ್ವರರ ಮಹಿಮೆ ಅಪಾರ ಎಂದು ಬೆಂಗಳೂರಿನ ಕೈಲಾಸ ಆಶ್ರಮದ ಮಹಾಸಂಸ್ಥಾನದ ಜಗದ್ಗುರು ಆಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜರು ಹೇಳಿದರು.

ಪಟ್ಟಣದ ಮಡಿವಾಳೇಶ್ವರ ಮಠದಲ್ಲಿ ಸೋಮವಾರ ನೂತನ ಶಿಲಾಮಠ ಉದ್ಘಾಟಿಸಿ ಮಾತನಾಡಿ, ಮಡಿವಾಳೇಶ್ವರ ಗುರುಗಳ ಗುರುಪರಂಪರೆಯಲ್ಲಿ ನಡೆದು ಈಗಿನ ಮಡಿವಾಳೇಶ್ವರರು ಶ್ರೀಮಠದ ಸದ್ಭಕ್ತರನ್ನು ಉದ್ಧಾರ ಮಾಡುತ್ತಿದ್ದಾರೆ. ಜನರಿಗೆ ಇನ್ನಷ್ಟು ಧಾರ್ಮಿಕ ಸಂಸ್ಕಾರ ನೀಡಲು ಪಣತೊಟ್ಟಿರುವುದು ಶ್ಲಾಘನೀಯ ಎಂದರು.

ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳು ಮಾತನಾಡಿ, ಭಕ್ತರು ಮಡಿವಾಳೇಶ್ವರರ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಗದಗ-ಡಂಬಳ ತೋಂಟದಾರ್ಯ ಮಠದ ತೋಂಟದ ಜಗದ್ಗುರು ಡಾ.ಸಿದ್ದರಾಮ ಶ್ರೀಗಳು ಮಾತನಾಡಿ, ತಂಗೆಮ್ಮ ತಾಯಿ ಕಾರ್ಯ ಅವಿಸ್ಮರಣೀಯ. ಶ್ರೀಮಠದ ಪೀಠಾಧಿಪತಿ ಮಡಿವಾಳೇಶ್ವರರು ಸಮಾಜದ ಉನ್ನತಿಗೆ ಇನ್ನಷ್ಟು ಶ್ರಮಿಸಲಿ ಎಂದರು. ಶ್ರೀಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ ಮಾತನಾಡಿ, ಮಠದ ಉದ್ಧಾರಕ್ಕೆ ತಂಗೆಮ್ಮತಾಯಿ, ಜಯೇಂದ್ರಪುರಿ ಶ್ರೀಗಳು ಹಾಗೂ ಭಕ್ತರ ಸಹಕಾರ ಇರಲಿ ಎಂದರು. ಹೊಸೂರ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ, ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಬಳುಟಗಿ ಶಿವಕುಮಾರ ಸ್ವಾಮೀಜಿ, ಬಳ್ಳಾರಿ ಗೋವರ್ಧನಾನಂದ ಪುರಿ ಸ್ವಾಮೀಜಿ, ಶಿವನಾಪುರದ ಪ್ರಣವಾನಂದ ಪುರಿ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net