

ಮಡಿಕೇರಿ: ತೀತಿಮಾಡ ಅರ್ಜುನ್ ದೇವಯ್ಯ, ತೇಜಸ್ವಿನಿ ಶರ್ಮ ಮುಖ್ಯ ಪಾತ್ರದಲ್ಲಿರುವ ‘ಕೊಡವರ ಸಿಪಾಯಿ’ ಕೊಡವ ಭಾಷಾ ಚಲನಚಿತ್ರ ಬೆಂಗಳೂರಿನಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಬೆಂಗಳೂರಿನಲ್ಲಿ ಫೆ.26ರಿಂದ ಮಾ.4ರವರೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಆಯೋಜಿಸಲಾಗಿದ್ದು, ಚಿತ್ರೋತ್ಸವಕ್ಕೆ 220ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಈ ಪೈಕಿ 1.05 ಗಂಟೆ ಅವಧಿಯ ‘ಕೊಡವರ ಸಿಪಾಯಿ’ ಸೇರಿ 25 ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಕೊಡವರ ಸಿಪಾಯಿ ಕೋಲ್ಕತದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿ ಉತ್ಸವದಲ್ಲಿಯೂ ಪ್ರದರ್ಶನ ಕಂಡಿತ್ತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆರೆಕಂಡಿದ್ದ ಕೊಡವರ ಸಿಪಾಯಿ ಕೊಡಗಿನ ಬಹುತೇಕ ಊರುಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಮೈಸೂರು ಕೊಡವ ಸಮಾಜದಲ್ಲಿಯೂ ಪ್ರದರ್ಶಿಸಲಾಗಿದ್ದ ಚಿತ್ರವನ್ನು ಫೆ.28ರಂದು ಬೆಂಗಳೂರು ಕೊಡವ ಸಮಾಜದಲ್ಲಿಯೂ ಪ್ರದರ್ಶಿಸಲಾಗುತ್ತಿದೆ.ಈವರೆಗೆ 100ಕ್ಕೂ ಅಧಿಕ ಪ್ರದರ್ಶನ ಕಂಡ ಹೆಗ್ಗಳಿಕೆಯ ಕೊಡವರ ಸಿಪಾಯಿ ಕೊಡಗಿನ ಸೈನಿಕನೊಬ್ಬ ಕರ್ತವ್ಯದಿಂದ ನಿವೃತ್ತನಾದ ಬಳಿಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮತ್ತು ಆ ಯೋಧನ ಬದುಕು ಬವಣೆಯ ಕಥೆ ಹೊಂದಿದೆ. ಉಳುವಗಂಡ ಕಾವೇರಿ ಚಿತ್ರಕಥೆ ಬರೆದಿರುವ ಕೊಡವರ ಸಿಪಾಯಿಗೆ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನವಿದೆ.24ಆದರ್ಶ್‌ಕೆಡಿಜಿಎ5: ’ಕೊಡವರ ಸಿಪಾಯಿ’.