ಮಡಿಕೇರಿ-ಸುಳ್ಯ ಹೆದ್ದಾರಿಯಲ್ಲಿ ಎರಡು ದಿನ ರಾತ್ರಿ ಸಂಚಾರಕ್ಕೆ ಬ್ರೇಕ್

road block
Published on

ಸುಳ್ಯ: ಕೊಡಗು ಜಿಲ್ಲೆಯ ಮದೆನಾಡು ಬಳಿ ಭೂಕುಸಿತದ ಆತಂಕ ಹಿನ್ನೆಲೆಯಲ್ಲಿ ಮಡಿಕೇರಿ-ಸುಳ್ಯ ಹೆದ್ದಾರಿಯನ್ನು ಎರಡು ದಿನಗಳ ಕಾಲ ರಾತ್ರಿ ವೇಳೆ ಬಂದ್ ಮಾಡಿ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


ಆ.10 ಹಾಗೂ 11ರಂದು ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ. ರಾತ್ರಿ 8.30ರಿಂದ ಬೆಳಗ್ಗೆ 6.30ರವರೆಗೆ ವಾಹನ ಸಂಚಾರ ನಿಷೇಧವಿದೆ. ಹಗಲಿನ ವೇಳೆ ಎಂದಿನಂತೆ ವಾಹನ ಸಂಚಾರ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೆದ್ದಾರಿಯ ಮದೆನಾಡು ಬಳಿಯ ಕರ್ತೋಜಿ ಎಂಬಲ್ಲಿ ಗುಡ್ಡ ಕುಸಿತವಾಗಿದ್ದು, ಇನ್ನಷ್ಟು ಕುಸಿತದ ಭೀತಿ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಬಂದ್ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಕೊಡಗು ಜಿಲ್ಲಾಡಳಿತ ನಿರ್ಧರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net