ಸ್ವಾತಂತ್ರೃ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಪ್ರತಿಮೆ ಎದುರು ಸ್ವಾತಂತ್ರೊೃೀತ್ಸವ

15mdka14 - Copy
Published on

ಮಡಿಕೇರಿ: ಹುತಾತ್ಮ ಸ್ವಾತಂತ್ರೃ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಪ್ರತಿಮೆ ಬಳಿ ಸೋಮವಾರ ಭಾರತ ಸ್ವಾತಂತ್ರೃದ ಅಮೃತ ಮಹೋತ್ಸವ ಆಚರಿಸಲಾಯಿತು.

ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಅಪ್ಪಯ್ಯ ಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕೊಡಗು ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ ಧ್ವಜಾರೋಹಣ ನೆರವೇರಿಸಿದರು.

ಲಿಟಲ್ ಫ್ಲವರ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಅಪ್ಪಯ್ಯ ಗೌಡರ ಕುರಿತು ನಮನ ಗೀತೆ ಹಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಕೋಳಿಬೈಲು ಹರಿಣಿ ದೇಶ ಭಕ್ತಿಗೀತೆ ಹಾಡಿದರು.

ಕೇಂದ್ರ ಮೀಸಲು ಪಡೆ ನಿವೃತ್ತ ಡಿಐಜಿ ಅಮೆ ಶಿವರಾಯ್, ಸಮಾಜ ಸೇವಕ ಅವಿನಾಶ್ ಕೇಸರಿ, ನಗರಸಭೆ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್, ಕೊಡಗು ಗೌಡ ಸಮಾಜಗಳ ಒಕ್ಕೂಟ ಕಾರ್ಯದರ್ಶಿ ಪೇರಿಯನ ಉದಯ, ಸಹ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ಕೊಡಗು ಗೌಡ ಸಮಾಜ ಕಾರ್ಯದರ್ಶಿ ಕೋಳುಮುಡಿಯನ ಅನಂತ್‌ಕುಮಾರ್, ಕೊಡಗು ಗೌಡ ವಿದ್ಯಾಸಂಘ ಕಾರ್ಯದರ್ಶಿ ಕೊಟ್ಟಕೇರಿಯನ ದಯಾನಂದ್, ನಿರ್ದೇಶಕ ತಳೂರು ದಿನೇಶ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಖಜಾಂಚಿ ನೈಯ್ಯಣಿ ಸಂಜು, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ, ನಿರ್ದೇಶಕರಾದ ಪುದಿಯನೆರವನ ರಿಶಿತ್ ಮಾದಯ್ಯ, ಕುಟ್ಟನ ಪ್ರಶಾಂತ್, ನಡುಮನೆ ಪವನ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ, ಮಾಜಿ ಸದಸ್ಯೆ ಕಡ್ಲೇರ ತುಳಸಿ ಮೋಹನ್, ಕೊಡಗು ಗೌಡ ಮಹಿಳಾ ಒಕ್ಕೂಟ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net