ಟೆಕ್ವಾಂಡೋ ಸ್ಪರ್ಧೆಗೆ ಮಡಿಕೇರಿ ವಿದ್ಯಾರ್ಥಿಗಳು ಆಯ್ಕೆ

karate
Published on

ಮಡಿಕೇರಿ: ೨೦೨೩-೨೪ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿಗೆ ಮಡಿಕೇರಿಯ ಸಂತ ಮೈಕಲರ ಪಿಯು ಕಾಲೇಜ್‌ನ ಎಂ.ಜೀವನ್, ಸಿ.ಕೃಷ್ಣಪಾಂಡಿ, ಎಚ್.ಎಸ್.ಮೋಹಿತ್, ಪಿ.ಕ್ಯಾಲ್ವಿನ್ ಹಾಗೂ ಸಂತ ಜೋಸೆಫರ ಪಿಯು ಕಾಲೇಜ್‌ನ ಬಿ.ವಿ.ವೈಷ್ಣವಿ ಆಯ್ಕೆಯಾಗಿದ್ದಾರೆ.


ತುಮಕೂರಿನ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.೪ ರಂದು ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ರಾಜ್ಯ ಟೆಕ್ವಾಂಡೋ ತರಬೇತುದಾರ ಹಾಗೂ ಕೊಡಗು ಜಿಲ್ಲಾ ವ್ಯವಸ್ಥಾಪಕ, ಮರ್ಕರ ಟೆಕ್ವಾಂಡೋ ಕ್ಲಬ್‌ನ ಮಾಸ್ಟರ್ ಕುಶಾಲ್ ಕುಮಾರ್ ವಿದ್ಯಾರ್ಥಿಗಳೊಂದಿಗೆ ತೆರಳಲಿದ್ದಾರೆ.


ಎರಡೂ ಕಾಲೇಜ್‌ನ ಪ್ರಾಂಶುಪಾಲರ ಪ್ರೋತ್ಸಾಹ ಹಾಗೂ ಸಂತ ಮೈಕಲರ ಕಾಲೇಜ್‌ನ ದೈಹಿಕ ಶಿಕ್ಷಕಿ ಐ.ಜಾನಕಿರವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತರಬೇತುದಾರ ಕುಶಾಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net