ಕೇರಳದಲ್ಲಿ ಸಮುದ್ರ ಪಾಲಾದ ಕೊಡಗಿನ ಯುವಕ

14mdkj6 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಶಬರಿಮಲೆಗೆ ತೆರಳಿದ್ದ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (೨೫) ಶನಿವಾರ ಕೇರಳದ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮಾಲೆಧಾರಿಯಾಗಿ ಜ.೯ ರಂದು ಶಬರಿಮಲೆಗೆ ಸ್ನೇಹಿತರೊಂದಿಗೆ ತೆರಳಿದ್ದ ಶಶಾಂಕ್ ಮಡಿಕೇರಿಯತ್ತ ಆಗಮಿಸುತ್ತಿದ್ದ ವೇಳೆ ಕಣ್ಣೂರು ಬೀಚ್‌ಗೆ ತೆರಳಿದ್ದರು.

ಶನಿವಾರ ಮುಂಜಾನೆ ಕಣ್ಣೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಪಯ್ಯನೂರು ದೇವಾಲಯಕ್ಕೆ ತೆರಳಿದ ಬಳಿಕ ಪೆರಿಯಕಂ ಗ್ರಾಮದಲ್ಲಿರುವ ಚುಡಾಡು ಬೀಜ್‌ಗೆ ತೆರಳಿದ್ದರು. ತಮ್ಮೊಂದಿಗೆ ಶಬರಿಮಲೆಗೆ ತೆರಳಿದ್ದ ಇಬ್ಬರು ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿದ್ದ ವೇಳೆ ಸಮುದ್ರದ ಅಲೆಗೆ ಮೂವರು ಸಿಲುಕಿದ್ದರು. ಅಪಾಯದಲ್ಲಿದ್ದ ಮೇಕೇರಿ ನಿವಾಸಿ ಮಣಿ, ಅರಂತೋಡು ನಿವಾಸಿ ಚಿಂತನ್ ಸ್ಥಳದಲ್ಲಿದ್ದವರು ರಕ್ಷಿಸಿ ದರು. ಆದರೆ, ಶಶಾಂಕ್ ಅಲೆಯ ನಡುವೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಕಣ್ಣೂರಿನಲ್ಲಿ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಯಿತು.

ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಶಾಂಕ್ ಜಲಾಶಯ ಬಡಾವಣೆ ನಿವಾಸಿ ಎಸ್.ಲೋಕೇಶ್- ಲಲಿತಾ ದಂಪತಿ ಪುತ್ರ. ಅವಿವಾಹಿತ ಶಶಾಂಕ್‌ಗೆ ಒಬ್ಬ ಸಹೋದರಿ ಇದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net