ಚಿನ್ನಾಭರಣ ಕಳವು ಆರೋಪಿ ಬಂಧನ

Published on


ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಇಬ್ನಿವಳವಾಡಿ ಗ್ರಾಮದ ಮೋನಿಶ್ (18) ಬಂಧಿತ.
ಮೇ 13 ರಂದು ಇಬ್ನಿವಳವಾಡಿ ಗ್ರಾಮದ ಎಂ.ಪಿ. ಶಶಿಧರ್ ಎಂಬುವರ ಮನೆಯ ಲಾಕರ್ ಒಡೆದು ಅಲ್ಲಿದ್ದ 9 ಗ್ರಾಂ. ನ ಒಂದು ಚಿನ್ನದ ಸರ, 4 ಗ್ರಾಂ.ನ ಒಂದು ಚಿನ್ನದ ಸರ ಹಾಗೂ ಪೆಂಡೆಂಟ್, ಮೂರು ಚಿಕ್ಕ ಚಿನ್ನದ ಉಂಗುರ ಹಾಗೂ ಒಂದು ದೊಡ್ಡ ಉಂಗುರ ಒಟ್ಟು 4 ಗ್ರಾಂ., 4 ಗ್ರಾಂ.ನ ಒಂದು ಜತೆ ಚಿನ್ನದ ಓಲೆ ಹಾಗೂ ಹ್ಯಾಂಗಿಂಗ್ಸ್ ಸೇರಿದಂತೆ ಚಿನ್ನಾಭರಣಗಳು ಕಳ್ಳತನವಾಗಿದ್ದು, ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮಡಿಕೇರಿಯಲ್ಲಿ ಬಂಧಿಸಿದ್ದು, ಒಟ್ಟು 96,500 ರೂ. ಮೌಲ್ಯದ 31 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ಗ್ರಾಮಾಂತರ ವೃತ್ತದ ನಿರೀಕ್ಷಕ ಸಿ.ಎನ್.ದಿವಾಕರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಎಚ್.ವಿ.ಚಂದ್ರಶೇಖರ್, ಸಿಬ್ಬಂದಿ ತೀರ್ಥಕುಮಾರ್, ಪ್ರೇಮ್‌ಕುಮಾರ್, ಶಿವರಾಜೇಗೌಡ, ಕಲ್ಲಪ್ಪ ಹಿಟ್ನಾಳ್ ಮತ್ತು ಚಾಲಕರಾದ ಪ್ರವೀಣ್‌ಕುಮಾರ್, ನಾಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net