ಮೇಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶುದ್ದ ಕುಡಿಯುವ ನೀರಿನ ಘಟಕ ಹಸ್ತಾಂತರ

17mdkj1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಮೇಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕವನ್ನು ಕೊಡುಗೆ ಯಾಗಿ ಜಿಲ್ಲಾ ರೋಟರಿ ಗವರ್ನರ್ ಪ್ರಕಾಶ್ ಕಾರಂತ್ ಹಸ್ತಾಂತರಿಸಿದರು.

ಮೇಕೇರಿ ಶಾಲೆಯಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ದಾನಿಗಳಾದ ಮಡಿಕೇರಿಯ ಮಹೇಶ್ ಎಂಟರ್ ಪ್ರೈಸಸ್‌ನ ಮಾಲೀಕ ಎಸ್. ಹರೀಶ್‌ಕುಮಾರ್ ರೋಟರಿ ಮಿಸ್ಟಿಹಿಲ್ಸ್ ಮೂಲಕ ನೀಡಿದ ಬಿಸಿ ಮತ್ತು ತಣ್ಣಗಿನ ಶುದ್ದ ನೀರಿನ ಘಟಕ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ರೋಟರಿ ಜಿಲ್ಲೆ ೩೧೮೧ ನ ಗವರ್ನರ್ ಪ್ರಕಾಶ್ ಕಾರಂತ್, ಅಪೇಕ್ಷಿತರಿಗೆ ದಾನ ಮಾಡುವ ಸಂದರ್ಭ ಸಿಗುವ ಆತ್ಮತಪ್ತಿಗಿಂತ ಬೇರೆ ಸಮಧಾನ ಯಾವುದರಿಂದಲೂ ದೊರಕುವುದಿಲ್ಲ. ರೋಟರಿ ಸಂಸ್ಥೆ ಕೂಡ ಅಗತ್ಯವುಳ್ಳವರಿಗೆ ವಿದ್ಯಾಸಿರಿ, ಜಲಸಿರಿ, ವನಸಿರಿ, ಆರೋಗ್ಯ ಸಿರಿ ಎಂಬ ಜಿಲ್ಲಾ ಯೋಜನೆಗಳ ಮೂಲಕ ನಾನಾ ರೀತಿಯ ಸಹಾಯ ನೀಡುತ್ತಾ ಬಂದಿದೆ. ಶುದ್ದ ನೀರಿನ ಘಟಕದ ಮೂಲಕ ದೊರಕುವ ಶುದ್ದ ನೀರಿನಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ನೀರು ಕುಡಿಯಲು ದೊರಕಿ, ಅನಾರೋಗ್ಯ ಪೀಡಿತರಾಗುವವರ ಸಂಖ್ಯೆ ಕಡಮೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಈ ಶಾಲೆಯಲ್ಲಿನ ೪೬ ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ಅಗತ್ಯತೆ ಮನಗಂಡು ಮಿಸ್ಟಿಹಿಲ್ಸ್ ದಾನಿಗಳಾದ ಹರೀಶ್‌ಕುಮಾರ್ ಸಹಕಾರದಿಂದ ೧೫ ಸಾವಿರ ರೂಪಾಯಿ ವೆಚ್ಚದಲ್ಲಿ ಘಟಕವನ್ನು ನೀಡಿದೆ ಎಂದರು.

ರೋಟರಿ ವಲಯ ೬ ರ ಆಸ್ಸಿಸೆಂಟ್ ಗವರ್ನರ್ ರತನ್ ತಮ್ಮಯ್ಯ, ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ, ರೋಟರಿ ಜಿಲ್ಲಾ ಸೇನಾನಿ ಅವಿಲ್ ಮೆನೇಜಸ್, ದಾನಿ ಹರೀಶ್‌ಕುಮಾರ್, ಪ್ರಭಾರ ಮುಖ್ಯಶಿಕ್ಷಕಿ ಕೆ.ಎಂ. ಸಬಿತಾ, ಆಡಳಿತ ಮಂಡಳಿ ಅಧ್ಯಕ್ಷ ರಫೀಕ್, ಗ್ರಾಮ ಪ್ರಮುಖರಾದ ಕುಮಾರ್, ಲತೀಶ್, ರೋಟರಿ ಮಿಸ್ಟಿಹಿಲ್ಸ್ ಪ್ರಮುಖರಾದ ಬಿ.ಜಿ. ಅನಂತಶಯನ, ಎಚ್.ಟಿ. ಅನಿಲ್, ಮೋಹನ್ ಪ್ರಭು, ಎ.ಕೆ. ವಿನೋದ್, ದೇವಣೀರ ತಿಲಕ್, ಪೂವಯ್ಯ, ಪಿ.ವಿ. ಅಶೋಕ್, ರತ್ನಾಕರ್ ರೈ, ನಮಿತಾ ರೈ, ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net