ಮನೆ ಕೊಡಿ… ಇಲ್ಲ ದಯಾ ಮರಣಕ್ಕ ಅನುಮತಿ ನೀಡಿ

16mdka7 - Copy
Published on

ಮಡಿಕೇರಿ: ನನಗೆ ಸರ್ಕಾರಿ ಮನೆ ಕೊಡಿ. ಇಲ್ಲದಿದ್ದಲ್ಲಿ ದಯಾ ಮರಣಕ್ಕೆ ಅನುಮತಿ ನೀಡಿ ಎಂದು ಮಂಗಳಮುಖಿ ರಿಹಾನ ಸಾದಿಕ್ ಮಂಗಳವಾರ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಮನವಿ ಸಲ್ಲಿಸಿದ್ದಾರೆ.

ಚಾಮುಂಡೇಶ್ವರಿನಗರದಲ್ಲಿದ್ದ ಮನೆ ಬೀಳುವ ಹಂತದಲ್ಲಿರುವುದರಿಂದ ೨೦ ದಿನದಿಂದ ಮಡಿಕೇರಿಯ ಲಾಡ್ಜ್‌ನಲ್ಲಿ ವಾಸಿಸುತ್ತಿದ್ದೇನೆ. ಪ್ರತಿನಿತ್ಯ ೪೦೦ ರೂ. ನೀಡಬೇಕಾಗಿದ್ದು, ಭಿಕ್ಷೆಯಾಚನೆ ಮಾಡಿ ಅಷ್ಟೊಂದು ಹಣ ಭರಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನನಗೆ ಜಂಬೂರು, ಗಾಳಿಬೀಡು ಇಲ್ಲ ಎಲ್ಲಿಯಾದರೂ ಸರ್ಕಾರದಿಂದ ಒಂದು ಮನೆ ಕೊಡಿ ಎಂದು ಕೋರಿದ್ದಾರೆ.

ಸರ್ಕಾರದಿಂದ ಮನೆ ಕೊಡಿಸುವಂತೆ ಐದಾರು ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ಅವರಿಂದ ಯಾವ ಸ್ಪಂದನೆಯೂ ಸಿಕ್ಕಿಲ್ಲ. ಮಂಗಳವಾರ ಮನವಿ ನೀಡಿದ್ದ ಸಂದರ್ಭದಲ್ಲಿ ತಮ್ಮಿಂದ ಏನೂ ಮಾಡಲಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ. ಇದು ನಾನು ನೀಡುವ ಕೊನೆ ಅರ್ಜಿ. ಇನ್ಮುಂದೆ ತೋಮದರೆ ಮಾಡಿಲ್ಲ. ದಯಾ ಮರಣಕ್ಕೆ ದಿನ ನಿಗದಿ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಮಂಗಳಮುಖಿ ಎಂಬ ಕಾರಣಕ್ಕಾಗಿ ಯಾರೂ ಬಾಡಿಗೆಗೆ ಮನೆ ನೀಡುವುದಿಲ್ಲ. ಚಾಮುಂಡೇಶ್ವರಿನಗರದಲ್ಲಿ ಬಾಡಿಗೆಗೆ ವಾಸವಿದ್ದ ಮನೆ ಬೀಳುವ ಹಂತದಲ್ಲಿದೆ. ಹೀಗಾಗಿ ಲಾಡ್ಜ್‌ನಲ್ಲಿ ವಾಸವಾಗಿದ್ದೇನೆ. ಅದಕ್ಕಾಗಿ ಸರ್ಕಾರಿ ಮನೆ ಕೊಡಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಅವರು ಕಣ್ತೆರೆಯಬೇಕಾಗಿದೆ ಎಂದು ರಿಹಾನ ಸಾದಿಕ್ ವಿಜಯವಾಣಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net