ರಾಜಾಸೀಟ್ ಉದ್ಯಾನದಲ್ಲಿ ಜೇನು ಉತ್ಸವ

17mdkd2
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ರಾಜಾಸೀಟ್ ಉದ್ಯಾನದಲ್ಲಿ ಡಿ.೨೪ ಮತ್ತು ೨೫ ರಂದು ಜೇನು ಉತ್ಸವ ಆಯೋಜಿಸಲಾಗಿದೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಉತ್ಸವ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚೆಕ್ಕೇರ ಪ್ರಮೋದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗಿನ ಜೇನು ತುಪ್ಪ ತನ್ನದೇ ಆದ ವಿಶಿಷ್ಟ ಗುಣ ಹೊಂದಿದ್ದು, ಕೊಡಗಿನ ಜೇನು ತುಪ್ಪಕ್ಕೆ ದೇಶ- ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೊಡಗಿನಲ್ಲಿ ಜೇನು ಕೃಷಿ ಉತ್ತೇಜನಗೊಳಿಸಲು ಜೇನು ಬೆಳೆಗಾರರು, ವಿಜ್ಞಾನಿಗಳು, ಜೇನು ಕೃಷಿ ಅಧಿಕಾರಿಗಳು ಹಾಗೂ ಜೇನು ಸೊಸೈಟಿ ಮತ್ತು ಜೇನು ಪರಿಕರ ತಯಾರಕರು, ಜೇನು ತುಪ್ಪ ಉತ್ಪಾದನೆ ಕಂಪನಿಯನ್ನು ಒಂದೇ ವೇದಿಕೆಗೆ ತರಲು ಉತ್ಸವ ಆಯೋಜಿಸಲಾಗಿದೆ. ಇದರೊಂದಿಗೆ ಕೊಡಗಿನ ಜೇನನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶವೂ ಇದೆ.

ಜೇನು ಉತ್ಸವದಲ್ಲಿ ವಿವಿಧ ಜೇನು ಉತ್ಪಾದನೆ ಮಾಡುವ ಜೇನು ಕೃಷಿಕರು, ಜೇನು ವ್ಯವಹಾರ ಮಾಡುವ ಸಂಘ ಸಂಸ್ಥೆಗಳು, ಜೇನು ತುಪ್ಪ ಉತ್ಪಾದನೆ ಮಾಡುವ ರೈತ ಉತ್ಪಾದನಾ ಕಂಪನಿಗಳು, ಜೇನು ಪೆಟ್ಟಿಗೆ, ಜೇನು ಮೇಣ ಜೇನು ನೊಣ, ಜೇನು ಉಪ ಉತ್ಪನ್ನ ತಯಾರಿಕೆ ಮಾಡುವ ಕಂಪನಿಗಳನ್ನು ಜೇನು ಮೇಳಕ್ಕೆ ಆಹ್ವಾನಿಸಲಾಗಿದೆ.

ಸ್ಥಳೀಯ ಸಂಶೋಧನ ಕೇಂದ್ರದ ವಿಜ್ಞಾನಿಗಳು, ಅರಣ್ಯ ಕಾಲೇಜಿನ ಜೇನು ವಿಭಾಗದ ವಿಜ್ಞಾನಿಗಳು ಹಾಗೂ ಇಲಾಖೆಯ ಜೇನು ಕೃಷಿ ಅಧಿಕಾರಿಗಳಿಂದ ಜೇನು ಸಾಕಾಣಿಕೆ ಬಗ್ಗೆ ತಾಂತ್ರಿಕ ಮಾಹಿತಿ ಹಾಗೂ ಪ್ರದರ್ಶನ ನೀಡಲಾಗುತ್ತದೆ. ಜೇನು ಉತ್ಸವದಲ್ಲಿ ಮಾರಾಟ ಮಳಿಗೆ ಇಡಲು ಇಚ್ಚಿಸುವವರು ತೋಟಗಾರಿಕೆ ಇಲಾಖೆಯಲ್ಲಿ ಹೆಸರು ನೊಂದಹಿಸಿಕೊಳ್ಳುವಂತೆ ತಿಳಿಸಿದ್ದಾರೆ.

ವಸ್ತು ಪ್ರದರ್ಶನ ಮಳಿಗೆಯನ್ನು ಜೇನು ಉತ್ಪಾದನೆ ಮಾಡುವ ಜೇನು ಕೃಷಿಕರು, ಜೇನು ಸಂಘ ಸಂಸ್ಥೆಗಳು, ರೈತ ಉತ್ಪಾದನಾ ಕಂಪನಿ ಗಳು, ಜೇನು ಪೆಟ್ಟಿಗೆ, ಜೇನು ಮೇಣ , ಜೇನು ನೊಣ, ಜೇನು ಉಪ ಉತ್ಪನ್ನ ತಯಾರಿಕೆ ಮಾಡುವ ಮೂಲ ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚೆಕ್ಕೇರ ಪ್ರಮೋದ್ (೯೪೮೩೧೧೦೬೨೧) ಅಥವಾ ಜಿಲ್ಲಾ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ಬಿ.ಡಿ. ವಸಂತ್ (೯೪೪೯೦೭೫೦೭೭) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net