ಮಡಿಕೇರಿ ರಾಘವೇಂದ್ರ ದೇವಾಲಯ ಬಳಿ ನೇತಾಜಿ ಜಂಕ್ಞನ್

24mdkj1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೬ನೇ ಜನ್ಮ ದಿನಾಚರಣೆ ಅಂಗವಾಗಿ ರಾಘವೇಂದ್ರ ದೇವಾಲಯ ಬಳಿ ಸೋಮವಾರ ನೇತಾಜಿ ಜಂಕ್ಷನ್ ಎಂದು ನಾಮಕರಣ ಮಾಡಲಾಗಿದೆ. ಮಡಿಕೇರಿ ನಗರಸಭೆ ಸದಸ್ಯ ಕೆ.ಎಸ್. ರಮೇಶ್ ನಾಮಫಲಕ ಅನಾವರಣಮಾಡಿದರು.

ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಸುಭಾಷ್ ಚಂದ್ರ ಬೋಸ್ ಒಬ್ಬರಾಗಿ ದ್ದರು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಭಾರತ ಸ್ವಾತಂತ್ರ ಹೋರಾಟದಲ್ಲಿ ವಿಶಿಷ್ಟ ಪಾತ್ರ ವಹಿಸಿದರೆಂದು ಬಣ್ಣಿಸಿದರು.

ಸುಭಾಷ್ ಚಂದ್ರ ಬೋಸ್ ಅವರ ಜನಪ್ರಿಯ ಮಾತು ತುಮ್ ಮುಜೆ ಖೂನ್ ದೋ ಮೈನ್ ತುಮ್ಹೆ ಆಜಾದಿ ದುಂಗಾ (ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತೇನೆ) ಸದಾ ನೆನಪಿಗೆ ಬರುತ್ತದೆ. ಬೋಸ್ ಉಗ್ರ ಸ್ವಾತಂತ್ರ್ಯ ಹೋರಾಟಗಾರ ಮತ್ತು ದೇಶಭಕ್ತರಾಗಿದ್ದರು. ಸ್ವತಂತ್ರ ಭಾರತದ ಕಲ್ಪನೆಗೆ ಬದ್ಧತೆಯಿಂದ ಅವರು ತೆಗೆದುಕೊಂಡ ಧೈರ್ಯಶಾಲಿ ನಿರ್ಧಾರಗಳು ಅವರನ್ನು ಖ್ಯಾತರನ್ನಾಗಿ ಮಾಡಿದೆ. ಅವರ ಆದರ್ಶ ಮತ್ತು ತ್ಯಾಗ ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿ ನೀಡುತ್ತವೆ ಎಂದರು.

ಬೋಸ್ ಜನ್ಮ ದಿನದಂದು ಅವರಿಗೆ ಕೃತಜ್ಞತೆಯಿಂದ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರ ಸವಿನೆನಪಿಗಾಗಿ ಮಡಿಕೇರಿ ನಗರದ ವಾರ್ಡ್ ನಂಬರ್ ೬ ರ ಸ್ಥಳೀಯ ರಾಘವೇಂದ್ರ ದೇವಾಲಯದ ಬಳಿ ನೇತಾಜಿ ಜಂಕ್ಷನ್ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಲಾಗಿದೆ ಎಂದು ಕೆ.ಎಸ್. ರಮೇಶ್ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ. ರವಿ, ಉದ್ಯಮಿ ಹರೀಶ್ ರೈ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net