ಮಡಿಕೇರಿಯ ನಾಟ್ಯ ಕಲಾತಂಡ ಚಾಂಪಿಯನ್

7mdks8 - Copy
Published on

ಮಡಿಕೇರಿ: ಕೂರ್ಗ್ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಡ್ಯಾನ್ಸ್ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿಯ ನಾಟ್ಯ ಕಲಾತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿದೆ.

ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನೃತ್ಯ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಸೋಲೋ ವಿಭಾಗದಲ್ಲಿ ಗ್ರಂಥ, ಅದಿಥಿ, ತೇಜಸ್, ಹರ್ಷಿತಾ ಚಿನ್ನದ ಪದಕ ಪಡೆದಿದ್ದು, ಯಾನ ಶೆಟ್ಟಿ, ಆರ್ಯ ಬೆಳ್ಳಿ ಪದಕ ಗೆದ್ದಿದ್ದಾರೆ.

ಜೋಡಿ ವಿಭಾಗದಲ್ಲಿ ಸಾನ್ವಿಕಾ-ದಿಶಾ, ಇಂಚರಾ-ಆರಾದ್ಯ, ಅದಿಥಿ-ಆರ್ಯ, ತೇಜಸ್-ಹರ್ಷಿತಾ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ.

ಗುಂಪು ನೃತ್ಯದಲ್ಲಿ ಸಂಸ್ಥೆಯ ೬ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಕೊಡಗಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ಬ್ಯಾಟಲ್ ನೃತ್ಯ ಸ್ಪರ್ಧೆಯಲ್ಲಿ ಹರ್ಷಿತಾ ಚಿನ್ನ ಗೆದ್ದಿದ್ದು, ತೇಜಸ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನಾಟ್ಯಕಲಾ ನೃತ್ಯ ಸಂಯೋಜಕ ಅಭಿಷೇಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net