ಸನ್ನಿಸೈಡ್‌ನಲ್ಲಿ ಮಿರೇಲ್ ಚಂಗಪ್ಪಗೆ ಶ್ರದ್ಧಾಂಜಲಿ

14mdkj8 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪುತ್ರಿ ಮಿರೇಲ್ ಚಂಗಪ್ಪ ಅವರ ನಿಧನಕ್ಕೆ ಶನಿವಾರ ತಿಮ್ಮಯ್ಯ ಸ್ಮಾರಕ ಭವನ ಸನ್ನಿಸೈಡ್‌ನಲ್ಲಿ ಶದ್ದಾಂಜಲಿ ಸಲ್ಲಿಸಲಾಯಿತು.

ಮಿರೇಲ್ ಚಂಗಪ್ಪ ಹುಟ್ಟಿ ಬೆಳೆದ ಸನ್ನಿಸೈಡ್‌ನ್ನು ಅನಂತರ ಮಿರೇಲ್ ಅವರು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ವಶಕ್ಕೊಪ್ಪಿಸಿ ತಿಮ್ಮಯ್ಯ ಸ್ಮಾರಕ ಭವನ ಸ್ಥಾಪನೆಗೆ ಕಾರಣರಾದರು. ಮಿರೇಲ್ ಚಂಗಪ್ಪ ಅವರ ಭಾವಚಿತ್ರಕ್ಕೆ ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ, ನಾಯಕ್ ಸುಬೇದಾರ್ ಮೋಹನ್, ಸಿಬ್ಬಂದಿ ಪೊನ್ನುಕಂಡ ರಮ್ಯ ಮಾಚಯ್ಯ, ಕುಶಧರ, ಸುಭಾಷ್ ಚಂದ್ರ ಪುಪ್ಪಾರ್ಪಣೆ ಮಾಡಿ ೧ ನಿಮಿಷ ಮೌನಾಚರಣೆ ಮೂಲಕ ಶದ್ದಾಂಜಲಿ ಸಲ್ಲಿಸಿದರು.

ಮಿರೇಲ್ ಚಂಗಪ್ಪ ಅವರ ಒತ್ತಾಸೆಯಂತೆ ಸ್ಮಾರಕ ಭವನ ನಿರ್ಮಾಣವಾಗಿದ್ದು, ಅವರ ಕುಟುಂಬ ವರ್ಗದವರ ಸಹಕಾರ ಅತ್ಯಂತ ಮಹತ್ವದ್ದಾಗಿತ್ತು ಎಂದು ಗೌಡಂಡ ತಿಮ್ಮಯ್ಯ ಸ್ಮರಿಸಿದರು. ಶನಿವಾರ ತಿಮ್ಮಯ್ಯ ಸ್ಮಾರಕ ಭವನಕ್ಕೆ ಬಂದ ಸಂದರ್ಶಕರೂ ಮಿರೇಲ್ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net