ಮಡಿಕೇರಿ- ಮಂಗಳೂರು ಮಾರ್ಗದಲ್ಲಿ ಗುಡ್ಡ ಕುಸಿಯುವ ಆತಂಕ

9mdka2 - Copy
Published on

ಮಡಿಕೇರಿ: ಕೊಡಗಿನಲ್ಲಿ ಆಗಸ್ಟ್ ಮಳೆ ಅಬ್ಬರ ಹೆಚ್ಚಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ೨೭೫ರ ಬಳಿ (ಮಡಿಕೇರಿ- ಮಂಗಳೂರು ಮಾರ್ಗ) ಗುಡ್ಡ ದಲ್ಲಿ ಅಪಾಯಕಾರಿ ಬಿರುಕು ಕಾಣಿಸಿಕೊಂಡಿದೆ. ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿಯುವ ಹಂತದಲ್ಲಿದ್ದು, ಭೀತಿ ಸೃಷ್ಟಿಸಿದೆ. ಮಳೆ ಹೆಚ್ಚಾಗಿ ಬರೆ ಕುಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ೨೭೫ ಬಂದ್ ಆಗುವ ಸಾಧ್ಯತೆ ಇದೆ.

ಮದೆನಾಡು ಬಳಿ ಇರುವ ಗುಡ್ಡದಲ್ಲಿ ದೊಡ್ಡಮಟ್ಟದ ಬಿರುಕು ಕಾಣಿಸಿಕೊಂಡಿದೆ. ಬಿರುಕು ಬಿಟ್ಟಿರುವ ಗುಡ್ಡ ಕುಸಿತದಲ್ಲಿ ಮಡಿಕೇರಿ- ಮಂಗಳೂರು ಮಾರ್ಗದ ರಸ್ತೆ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಜೀವ ಹಾನಿ ಸಂಭವಿಸದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದೆ.

೨೦೧೮ ರಲ್ಲಿ ಕೊಡಗಿನಲ್ಲಿ ಸಂಭವಿಸಿದ ದೊಡ್ಡ ಪ್ರಮಾಣದ ಭೂಕುಸಿತದ ಸಂದರ್ಭ ಮದೆನಾಡು ಭಾಗದಲ್ಲಿಯೂ ಭೂಕುಸಿತ ಉಂಟಾ ಗಿತ್ತು. ಹಲವು ತಿಂಗಳು ಮಡಿಕೇರಿ- ಮಂಗಳೂರು ಮಾರ್ಗ ದಲ್ಲಿ ರಸ್ತೆ ಸಂಚಾರ ಬಂದ್ ಆಗಿತ್ತು. ಅದೇ ಜಾಗದಲ್ಲಿ ಈಗ ಮತ್ತೊಮ್ಮೆ ಅಪಾಯಕಾರಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net