ಮಡಿಕೇರಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ಎಂ.ಪಿ. ಕೃಷ್ಣರಾಜುವರನ್ನು ಸೋಮವಾರ ಗೌರವಿಸಲಾಯಿತು.
’ಮನೆಯಂಗಳದಲ್ಲಿ ಮನದುಂಬಿ ನಮನ’ ವಿಶೇಷ ಕಾರ್ಯಕ್ರಮದಡಿ ಪತ್ರಿಕಾ ರಂಗದ ಏಳಿಗೆಗಾಗಿ ದುಡಿದವರನ್ನು ಅವರ ಮನೆಗೆ ತೆರಳಿ ಗೌರವಿಸಲಾಗುತ್ತಿದೆ. ಅದರಂತೆ ಮಡಿಕೇರಿಯ ದೇಚೂರುವಿನಲ್ಲಿ ನೆಲೆಸಿರುವ ಕೃಷ್ಣರಾಜು ಮನೆಗೆ ತೆರಳಿ ಗೌರವಿಸಲಾಯಿತು. ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ತೊಡಗಿಸಿ ಕೊಂಡಿದ್ದ ತನ್ನನ್ನು ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವಿಸಿದ್ದರ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಕ್ಲಿಷ್ಟಕರ ಪರಿಸ್ಥಿತಿ ಎದುರಿಸಿ ’ರವಿ’ ಪತ್ರಿಕೆ ಬೆಳೆಸಿದ್ದೆವು. ಸ್ವಾರ್ಥವಿಲ್ಲದೆ, ಯಾರೆದೆರಿಗೂ ಕೈಚಾಚದೆ ಸೇವೆ ಸಲ್ಲಿಸಿದ ತೃಪ್ತಿ ಇದೆ. ತಂತ್ರಜ್ಞಾನದಲ್ಲಿ ಬಹಳ ಹಿಂದೆ ಇದ್ದ ಕಾಲದಲ್ಲೂ ಜನರಿಗೆ ಸುದ್ದಿ ಮುಟ್ಟಿಸಬೇಕೆಂದು ಪಣತೊಟ್ಟು ಹಗಲಿರುಳು ದುಡಿದಿದ್ದೇವೆ. ಇಂದು ಪತ್ರಿಕಾ ರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ತಂತ್ರಜ್ಞಾನದ ಬಳಕೆಯ ಪರಿಣಾಮ ಕ್ಷಣ ಕ್ಷಣದಲ್ಲಿ ಸುದ್ದಿಗಳು ಜನರನ್ನು ತಲುಪುತ್ತಿವೆ. ಪತ್ರಕರ್ತರು ಯಾರ ಮುಲಾಜಿಗೂ ಒಳಗಾಗದೆ, ಯಾವುದೇ ಆಮಿಷಕ್ಕೆ ಬಲಿಯಾಗದೆ ವೃತ್ತಿಯ ಘನತೆ ಹೆಚ್ಚಿಸಲು ಪಣತೊಟ್ಟು ಕಾರ್ಯನಿರ್ವಹಿಸು ವಂತೆ ಸಲಹೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಉಪಾಧ್ಯಕ್ಷ ಬಿ.ಜೆ. ಪ್ರದೀಪ್, ಖಜಾಂಚಿ ಆನಂದ್ ಕೊಡಗು, ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್, ಯಶೋದಾ ಉಪಾಧ್ಯಕ್ಷ ಮಂಜು, ನಿರ್ದೇಶಕರಾದ ಎಚ್.ಜೆ. ರಾಕೇಶ್, ಕಿಶೋರ್ ರೈ ಕತ್ತಲೆಕಾಡು, ನವೀನ್ ಸುವರ್ಣ, ಸ್ಟ್ಯಾನ್ಲಿ ಡೇವಿಡ್, ರಿಜ್ವಾನ್ ಹುಸೇನ್, ಸದಸ್ಯರಾದ ಅಬ್ದುಲ್ಲಾ, ಲೋಹಿತ್ ಗೌಡ ಮತ್ತಿತರರು ಇದ್ದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ಎಂ.ಪಿ. ಕೃಷ್ಣರಾಜು ವರನ್ನು ಸೋಮವಾರ ಗೌರವಿಸಲಾಯಿತು.