ಮಡಿಕೇರಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಬಾಚಿನಾಡಂಡ ನಂಜಪ್ಪ ನದಿಯಲ್ಲಿ ಮುಳುಗಿ ಸಾವು

Loins club
Published on

ಮಡಿಕೇರಿ: ನದಿಯಲ್ಲಿ ಮುಳುಗಿ ಮಡಿಕೇರಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಬಾಚಿನಾಡಂಡ ನಂಜಪ್ಪ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.

ಮಾದಾಪುರ ಹೊಳೆಯಲ್ಲಿ ಈಜುತ್ತಿದ್ದ ಇಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಂಜಪ್ಪ ಅವರ 10 ವರ್ಷದ ಮಗನು ಸಹ ಮೃತಪಟ್ಟಿದ್ದಾರೆ.

ನಂಜಪ್ಪ ಮಡಿಕೇರಿ ಲಯನ್ಸ್ ಕ್ಲಬ್ ಹಾಲಿ ನಿರ್ದೇಶಕರು ಹಾಗೂ ಲಯನ್ಸ್ ಟ್ರಸ್ಟ್ ಹಾಲಿ ಖಜಾಂಜಿ ಆಗಿದ್ದರು.

ನದಿಯಿಂದ ಮೃತ ದೇಹ ಹೊರಕ್ಕೆ ತೆಗೆಯಲಾಗಿದೆ. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net