ಡಿ.೧೮ ರಂದು ಕೊಡಗಿನ ನಿವೃತ್ತ ಯೋಧರು ಮತ್ತು ಕುಟುಂಬಸ್ಥರಿಗೆ ಕ್ರೀಡಾಕೂಟ

9mdkd6 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗಿನ ಎಲ್ಲಾ ನಿವೃತ್ತ ಯೋಧರು ಹಾಗೂ ಅವರ ಕುಟುಂಬದವರಿಗೆ ಕ್ರೀಡಾಕೂಟ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ಡಿ. ೧೮ ರಂದು ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಕೊಟ್ಟುಕತ್ತೀರ ಪಿ. ಸೋಮಣ್ಣ ಹೇಳಿದರು.

ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ತಮ್ಮ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದಿರುವವರಿಗೆ ಸೀಮಿತವಾಗಿ ಕ್ರೀಡಾಕೂಟ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಿಲ್ಲ. ಜಿಲ್ಲೆಯಲ್ಲಿರುವ ಎಲ್ಲಾ ಮಾಜಿ ಯೋಧರು ಹಾಗೂ ಅವರ ಕುಟುಂಬಸ್ಥರು ಪಾಲ್ಗೊಳ್ಳಬಹುದೆಂದರು.

ಪುರುಷರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ವಿವಿಧ ಹಂತದ ಓಟ, ಮಹಿಳೆಯರಿಗೆ ಹಗ್ಗಜಗ್ಗಾಟ, ಪಾಸಿಂಗ್ ದಿ ಬಾಲ್, ಸಂಗೀತ ಕುರ್ಚಿ, ಲೆಮೆನ್ ಆ್ಯಂಡ್ ಸ್ಪೂನ್, ಭಾರದ ಗುಂಡು ಎಸೆತ, ಓಟದ ಸ್ಪರ್ಧೆ, ಮಕ್ಕಳಿಗೆ ಕಾಳುಹೆಕ್ಕುವುದು ಸೇರಿದಂತೆ ವಿವಿಧ ಹಂತದ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಎಸ್. ಸುಧೀರ್ ಮಾತನಾಡಿ, ಅಂದು ಬೆಳಗ್ಗೆ ೮.೩೦ ಗಂಟೆಗೆ ೮ ಕ್ರೀಡಾ ಸಾಧಕರು ಓಂಕಾರೇಶ್ವರ ದೇವಾಲಯದಿಂದ ವಿಜಯ ಜ್ಯೋತಿಯನ್ನು ಮೆರವಣಿಗೆ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ತಂದು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಕ್ರೀಡಾಕೂಟ ಆರಂಭಗೊಳ್ಳಲಿದೆ. ಮಾಜಿ ಸೈನಿಕರಿಗೆ ಹಾಗೂ ಕುಟುಂಬದ ಸದಸ್ಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಣ್ಣಿನ ತಪಾಸಣಾ ನಡೆಯಲಿದೆ. ಅಗ್ನಿವೀರ್ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಪೂರಕ ಮಾಹಿತಿ ನೀಡಲಾಗುತ್ತದೆ ಎಂದರು.

ಕ್ರೀಡಾ ಸಂಚಾಲಕರಾದ ತಳೂರು ಕಾಳಪ್ಪ, ಕರ್ತಂಡ ಚಂದನಾ, ಮಡಿಕೇರಿ ಅಧ್ಯಕ್ಷ ಪಾಣಿಕುಟ್ಟೀರ ಕುಟ್ಟಪ್ಪ, ಸದಸ್ಯ ಮಾದೆಯಂಡ ನಾಚಪ್ಪ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net