ಕೊಡವ ಅಲ್ಬಮ್ ಸಾಂಗ್ ಲೇಲುಳ್ಳಿ ಲೇ ಲೇ ಪೋಸ್ಟರ್ ಅನಾವರಣ

7mdks11 - Copy
Published on

ಮಡಿಕೇರಿ: ಕೊಡಗಿನ ಸಂಸ್ಕೃತಿ ಬಿಂಬಿಸುವ ಲೇಲುಳ್ಳಿ ಲೇ ಲೇ ಕೊಡವ ಆಲ್ಬಮ್ ಸಾಂಗ್‌ನ ಪೋಸ್ಟರ್ ಅನ್ನು ಅನಾವರಣ ಮಾಡಲಾಯಿತು. ಎಬಿಎ ಕ್ರಿಯೇಷನ್ಸ್ ಸಾಹಿತ್ಯ ರಚಿತ, ಟೀಮ್ ವೆ ಟೈಬ್ಸೆ ಸಂಸ್ಥೆ ನಿರ್ಮಾಣದ ಅಲ್ಬಮ್ ಸಾಂಗ್ ಇದಾಗಿದೆ.

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಪ್ರತಿಮೆ ಎದುರು ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಕೊಟ್ಟುಕತ್ತೀರ ಪಿ.ಸೋಮಣ್ಣ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ ಪೋಸ್ಟರ್ ಬಿಡುಗಡೆ ಮಾಡಿದರು.

ಈ ಸಂದರ್ಭ ಅಜ್ಜಮಾಡ ಅಭಿಷೇಕ್ ಬಿದ್ದಪ್ಪ, ಮತ್ರಂಡ ಸ್ಯಾಮ್ ಪೂವಪ್ಪ, ಅಯ್ಶರಣಿಯಂಡ ಶಿಲನ್ ಚೋಂದಮ್ಮ, ಐಯ್ಯೆಟ್ಟಿರ ಮಿಥುನ್ ಮೇದಪ್ಪ, ಐಮಣಿಯಂಡ ನವೀನ್, ಗುಡಿಯಂಗಡ ಪೃಥ್ವಿ ತಿಮ್ಮಯ್ಯ, ಪೆಮ್ಮಂಡ ರೋಷನ್ ಪೆಮ್ಮಯ್ಯ, ಕಾಂಗ್ರೆಸ್ ಪ್ರಮುಖ ರಾದ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ, ತೆನ್ನೀರ ಮೈನ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net