ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ- ಚೆಟ್ಟಳ್ಳಿ ಮಾರ್ಗದ ಕತ್ತಲೆಕಾಡು ಸಮೀಪ ಬುಧವಾರ ಸಂಭವಿಸಿದ ಮೋಟಾರ್ ಬೈಕ್ ಹಾಗೂ ಅಂಬ್ಯುಲೆನ್ಸ್ ನಡುವಿನ ಅಪಘಾತದಲ್ಲಿ ಮೋಟಾರ್ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಚೆಟ್ಟಳ್ಳಿಯಿಂದ ಮಡಿಕೇರಿಗೆ ಆಗಮಿಸುತ್ತಿದ್ದ ಅಂಬ್ಯುಲೆನ್ಸ್ ಹಾಗೂ ಮಡಿಕೇರಿಯಿಂದ ಚೆಟ್ಟಳ್ಳಿಯತ್ತ ತೆರಳುತ್ತಿದ್ದ ಮೋಟಾರ್ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಚೆಟ್ಟಳ್ಳಿ ಕಾಫಿ ಬೋರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ (೪೪) ಮೃತಪಟ್ಟಿ ದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.