

ಮಡಿಕೇರಿ: ಟಿಪ್ಪು ಸಂತತಿಯವರು, ಹಿಂಬಾಲಕರಿಂದ ಕೊಡಗಿನ ಮೇಲೆ ೩೩ನೇ ದಾಳಿ ಈಗ ನಡೆಯುತ್ತಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತ ಪಡಿಸಿದರು.
ಸ್ವಾತಂತ್ರೃ ಹೋರಾಟಗಾರ ವೀರ ಸಾವರ್ಕರ್ ಅವರನ್ನು ಏಕೆ ಜಾತಿಯಿಂದ ನೋಡುವುದು. ಅವರ ಯಾವ ಜಾತಿಯವರೆಂದು ಗೊತ್ತಿಲ್ಲ. ಹೀಗಿದ್ದರೂ, ಮುಸ್ಲಿಂ ಏರಿಯಾದಲ್ಲಿ ವೀರ ಸಾವರ್ಕರ್ ಫೋಟೋ ಏಕೆ ಹಾಕಿದ್ದೆಂದು ಪ್ರಶ್ನಿಸುವುದರ ಮೂಲಕ ಸಿದ್ದರಾಮಯ್ಯ ದೇಶಭಕ್ತರ ಕೋಪಕ್ಕೆ ತುತ್ತಾಗಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಸೇರಿದ್ದಂತೆ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡಲಿ. ಆದರೆ, ಅಸಂಬದ್ಧ ಹೇಳಿಕೆ ನೀಡುವುದು ಸರಿ ನಾ. ಅವರಿಗಿಂತ ಹೆಚ್ಚು ದಾಟಿಯಿಂದ ಮಾತನಾಡಲು ಗೊತ್ತು. ಆದರೆ, ಅವರ ಹಾಗೇ ಕೀಳುಮಟ್ಟಕ್ಕೆ ಇಳಿಯುವುದಿಲ್ಲ. ಸಿದ್ದರಾಮಯ್ಯ ಎಲ್ಲರನ್ನು ಎಕವಚನದಲ್ಲಿ ಬೈಯುತ್ತಾರೆ. ನಮಗೇನು ಬರುದಿಲ್ಲ ಅಂದುಕೊಂಡಿದ್ದಾರೆ. ಅವರ ಸ್ಥಾನಕ್ಕೆ ಗೌರವ ಕೊಡುತ್ತೇನೆಂದರು.
ಬೆಂಗಳೂರಿಗೆ ಯಾವಾಗ ಹೋಗಬೇಕು ಆವಾಗ ಹೋಗುತ್ತೇವೆ. ಸ್ಪೀಕರ್ ಆಗಿದ್ದಾಗ ಇದ್ದ ಬೆದರಿಕೆಗೆ ಹೆದರಿರಲಿಲ್ಲ. ಪೊಲೀಸ್ ರಕ್ಷಣೆ ಇಲ್ಲದೆ ಸಂಚರಿಸುತ್ತಿದ್ದೆ. ಈಗ ಒಡ್ಡಿರುವ ಬೆದರಿಕೆಗೆ ಹೆದರುವ ಪ್ರಶ್ನೆ ಇಲ್ಲ. ಅಂತಹ ಬೆದರಿಕೆ ಬಹಳಷ್ಟು ನೋಡಿದ್ದೇನೆ.
ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಜೈಲಿನಲ್ಲಿದ್ದ ವ್ಯಕ್ತಿ ಡಿ.ಕೆ. ಶಿವಕುಮಾರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾರೂ ಜೈಲಿಗೆ ಹೋಗುತ್ತಾರೆಂದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಹೇಳಿದರು.