ಪತ್ರಕರ್ತರ ಆರೋಗ್ಯ ತಪಾಸಣೆ

1mdkn1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪನಾಸಿಯಾ ಪಾಲಿ ಕ್ಲಿನಿಕ್ (ಇಯರಿಗ್, ಸ್ಪೀಚ್ ಅಂಡ್ ಇನ್‌ಪ್ಲಾಂಟ್) ಸಹಯೋಗದಲ್ಲಿ ಪತ್ರಕರ್ತರ ಆರೋಗ್ಯ ತಪಾಸಣಾ ಶಿಬಿರ ಸೋಮವಾರ ನಡೆಯಿತು. ಕಿವಿ, ಮೂಗು, ಗಂಟಲು ಹಾಗೂ ದಂತ ಸಮಸ್ಯೆ ಗಳಿಗೆ ಸಂಬ೦ಧಿಸಿದತೆ ವೈದ್ಯರು ತಪಾಸಣೆ ಮಾಡಿದರು.

ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ.ತಿರುಮಲ ರಾವ್, ಇಎನ್‌ಟಿ ತಜ್ಞ ವೈದ್ಯೆ ಡಾ.ದಿವ್ಯ ಜ್ಯೋತಿ, ರೇಡಿಯೋ ಗ್ರಾಫರ್ ಕುಶಾಲ್ ಕುಮಾರ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯಕ್ರಮ ಸಂಯೋಜಕ ಜೈರಸ್ ಥಾಮಸ್ ಇದ್ದರು. ಪನಾಸಿಯಾ ಪಾಲಿ ಕ್ಲಿನಿಕ್ ಮುಖ್ಯಸ್ಥೆ ಡಾ.ರಾಧಾ ಸಿಂಹಾದ್ರಿ ಆಶಯದಂತೆ, ತ್ಯಾಗರಾಜ ಕಾಲನಿ ನಿವಾಸಿ ಶಾಹಿನಾ ಅವರಿಗೆ ಉಚಿತ ಶ್ರವಣ ಉಪಕರಣ ಹಸ್ತಾಂತರಿಸಲಾಯಿತು. ಸಂಘದ ಖಜಾಂಚಿ ಆನಂದ್ ಕೊಡಗು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net