೨೩ ಕಡೆ ಕೇಕ್ ಕತ್ತರಿಸಿದ ನಾಪಂಡ ಮುತ್ತಪ್ಪ

4mdkn1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿ(ಎಸ್) ಸಂಭವನೀಯ ಅಭ್ಯರ್ಥಿ ನಾಪಂಡ ಮುತ್ತಪ್ಪ ಶುಕ್ರವಾರ ತಮ್ಮ ೪೮ನೇ ಹುಟ್ಟುಹಬ್ಬ ಆಚರಿಸಿ ದರು. ಕ್ಷೇತ್ರ ವ್ಯಾಪ್ತಿಯ ೨೩ ಸ್ಥಳದಲ್ಲಿ ತಮ್ಮ ಅಭಿಮಾನಿಗಳು ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿದ್ದು ವಿಶೇಷ ವಾಗಿತ್ತು.

ಮೂರ್ನಾಡು, ಮಡಿಕೇರಿ, ಮಕ್ಕಂದೂರು, ಮಾದಾಪುರ, ಐಗೂರು, ಸೋಮವಾರಪೇಟೆ, ಅಬ್ಬೂರುಕಟ್ಟೆ, ಮಲ್ತೆ, ಕೊಡ್ಲಿಪೇಟೆ, ಶನಿವಾರಸಂತೆ, ಗೋಣಿಮರೂರು, ಆಳುವಾರ, ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕುಶಾಲನಗರ, ನೆಲ್ಲಿಹುದಿಕೇರಿ, ಹೊಸಕೋಟೆ, ಸುಂಟಿಕೊಪ್ಪ, ಸಿದ್ದಲಿಂಗಪುರದಲ್ಲಿ ಕೇಕ್ ಕತ್ತರಿಸಲಾಯಿತು.

ಕೇಕ್ ತತ್ತರಿಸಿದ ಬಳಿಕ ಅಭಿಮಾನಿಗಳು ಶಾಲು, ಮಾಲೆ ಹಾಕುವುದರ ಮೂಲಕ ಅಭಿನಂದನೆ ಸಲ್ಲಿಸಿದರು. ಇದುವರೆಗೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರಲಿಲ್ಲ. ಈ ಬಾರಿ ಅಭಿಮಾನಿಗಳು ಆಯೋಜಿಸಿದ್ದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದು, ವಿಧಾನಸಭೆ ಚುನಾವಣೆ ಹಿನ್ನೆಲೆ ಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಂತಾಗಿದೆ ಎಂದು ನಾಪಂಡ ಮುತ್ತಪ್ಪ ಹೇಳಿದರು. ನಾಪಂಡ ಮುತ್ತಪ್ಪ-ನಾಪಂಡ ಮುದ್ದಪ್ಪ ಅವಳಿ ಸಹೋದರರು ಜೆಡಿ(ಎಸ್) ಸೇರ್ಪಡೆಗೊಂಡ ಬಳಿಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net