

ಮಡಿಕೇರಿ: ಸ್ವಾತಂತ್ರೃಕ್ಕಾಗಿ ತ್ಯಾಗ- ಬಲಿದಾನಗೈದ ಮಹನೀಯರ ಆದರ್ಶ ಗೌರವಿಸಿ ಸಾಮರಸ್ಯದಿಂದ ಬಾಳ್ವೆ ನಡೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಕೊಡಗು ಜಿಲ್ಲಾಡಳಿತದಿಂದ ಮಡಿಕೇರಿ ಕೋಟೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ೭೬ನೇ ಸ್ವಾತಂತ್ರೊೃೀತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರೊೃೀತ್ಸವ ಸಂದೇಶ ನೀಡಿದರು. ದೇಶದ ಐಕ್ಯತೆ, ಸಮಗ್ರತೆ, ಸಂಸ್ಕೃತಿ, ಪರಂಪರೆಗಳ ರಕ್ಷಣೆಗೆ ಕೈಜೋಡಿಸೋಣ. ಸ್ವಾತಂತ್ರೃ ಹೋರಾಟದ ಶತಮಾನದ ಇತಿಹಾಸವು ದೇಶದ ಅಭಿವೃದ್ಧಿಗೆ ಮುನ್ನೋಟವಾಗಲಿ ಎಂದು ಆಶಿಸಿದರು.
ಭಾರತೀಯ ರಾಷ್ಟ್ರೀಯ ಚಳುವಳಿಯು ದೇಶದ ಸ್ವಾತಂತ್ರೃ ಹೋರಾಟದ ಮೈಲುಗಲ್ಲಾಗಿದೆ. ೧೮೮೫ ರಿಂದ ೧೯೪೭ ರವರೆಗೆ ಭಾರತೀಯ ರಾಷ್ಟ್ರೀಯತೆಯು ದೇಶದ ಎಲ್ಲೆಡೆ ಮೊಳಗುತ್ತಿತ್ತು. ಮಹಾತ್ಮ ಗಾಂಧೀಜಿ, ವಲ್ಲಭಬಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್, ವೀರ ಸಾರ್ವಕರ್, ಬಾಲಗಂಗಾಧರ ತಿಲಕ್, ಡಾ.ಬಿ.ಆರ್. ಅಂಬೇಡ್ಕರ್, ಜವಾಹರಲಾಲ್ ನೆಹರು, ಲಾಲ್ ಬಹಾದೂರ್ ಶಾಸ್ತ್ರಿ, ಮೌಲಾನ ಅಬ್ದುಲ್ ಕಲಾಂ ಅಜಾದ್, ಲಾಲಾ ಲಜಪತ್ ರಾಯ್, ಬಿಪಿನ್ ಚಂದ್ರಪಾಲ್, ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀ ಬಾಯಿ, ಸಂಗೊಳ್ಳಿ ರಾಯಣ್ಣ ಹೀಗೆ ಹಲವು ಮಹನೀಯರು ಸ್ವಾತಂತ್ರೃಕ್ಕಾಗಿ ಹೋರಾಡಿದರೆಂದು ಸ್ಮರಿಸಿ ದರು.
ಅನೇಕ ಮಹನೀಯರ ನೇತೃತ್ವದಲ್ಲಿ ಲಕ್ಷಾಂತರ ಭಾರತೀಯರು ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಸರ್ವಸ್ವವನ್ನು ಅರ್ಪಿಸಿ ದ್ದಾರೆ. ಸ್ವಾತಂತ್ರೃಕ್ಕಾಗಿ ನಡೆದ ಹೋರಾಟದಲ್ಲಿ ಕೊಡಗಿನ ಹಲವರು ವೀರರು ಪಾಲ್ಗೊಂಡಿದ್ದು, ಅವರ ಸೇನೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ.
ಸ್ವಾತಂತ್ರೃ ಹೋರಾಟದಲ್ಲಿ ಭಾಗವಹಿಸಿದ್ದ ಕೊಡಗಿನ ಗುಡ್ಡೆಮನೆ ಅಪ್ಪಯ್ಯಗೌಡ, ಪಂದ್ಯಂಡ ಬೆಳ್ಯಪ್ಪ, ಸಿ.ಎಂ. ಪೂಣಚ್ಚ, ಕೊಡಂದೇರ ಪೂವಯ್ಯ, ಕೋದಂಡ ಅಪ್ಪಯ್ಯ, ಸಿ.ಎಂ. ವೆಂಕಪ್ಪಯ್ಯ, ಗುಂಡುಕುಟ್ಟಿ ಮಂಜುನಾಥಯ್ಯ, ಎಂ.ಎಂ. ಸಿದ್ದಿಕ್, ಎಚ್.ಆರ್. ಕೃಷ್ಣಯ್ಯ, ಕೊಳ್ಳಿಮಾಡ ಕರುಂಬಯ್ಯ, ಮಂಡೇಪಂಡ ಕಾರ್ಯಪ್ಪ, ಮುಕ್ಕಾಟಿರ ಭೋಜಪ್ಪ, ಮಲ್ಲಂಗಡ ಚಂಗಪ್ಪ, ಮಾರಯ್ಯ ಮೊದಲಾದ ಮಹಾ ನಾಯಕರುಗಳಿಗೆ ನಮ್ಮ ಭಕ್ತಿ ಪೂರ್ವಕ ನಮನಗಳೆಂದರು.
ಭಾರತ ಸ್ವಾತಂತ್ರೃ ಚಳುವಳಿಯ ಸಂದರ್ಭ ಮಹಾತ್ಮ ಗಾಂಧೀಜಿ ಕೊಡಗಿಗೆ ಭೇಟಿ ನೀಡಿದ ಪ್ರಮುಖ ಸ್ವಾತಂತ್ರೃ ಹೋರಾಟಗಾರರು. ಮಹಾತ್ಮ ಗಾಂಧೀಜಿಯವರ ವಿಚಾರಧಾರೆ ಹಾಗೂ ಚಿಂತನೆಗಳು ಕೊಡಗಿನ ಹಲವು ನಾಯಕರಲ್ಲಿ ಭಾರತದ ಸ್ವಾತಂತ್ರೃ ಹೋರಾಟದ ಕಿಡಿ ಹಚ್ಚಿದವು. ದೇಶದ ಸ್ವಾತಂತ್ರೃ ಹೋರಾಟಕ್ಕೆ ಹಲವು ವೀರ ನಾಯಕರನ್ನು, ಕೆಚ್ಚೆದೆಯ ಸೈನಿಕರನ್ನು ಕೊಡಗು ನೀಡಿದೆ ಎಂದರು.
ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್‌ನಂತಹ ಅತ್ಯುನ್ನತ ಹುದ್ದೆ ಸೇರಿದ್ದಂತೆ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ, ದೇಶಕ್ಕಾಗಿ ಸೇವೆ ಸಲ್ಲಿಸಿದವರನ್ನು ಕೊಡಗು ಕೊಡುಗೆಯಾಗಿ ನೀಡಿದೆ. ಈ ಪೈಕಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆೆ.ಎಸ್. ತಿಮ್ಮಯ್ಯ ಭಾರತೀಯ ಸೇನಾ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದ ರತ್ನ ಎಂದು ಬಣ್ಣಿಸಿದರು.
ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯಕ್ತ ನವ ಭಾರತಕ್ಕಾಗಿ ನವ ಕರ್ನಾಟಕ ಘೋಷ ವಾಕ್ಯ ದೇಶವನ್ನು ಜಾಗೃತಿಗೊಳಿಸುವ ಹಾಗೂ ಉತ್ತಮ ಆಡಳಿತದ ಕನಸನ್ನು ನನಸು ಮಾಡುವ ಉತ್ಸವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಂಡಿತ್ತು. ರಾಷ್ಟ್ರಪ್ರೇಮ ವ್ಯಕ್ತ ಪಡಿಸುವಲ್ಲಿ ಆಗಸ್ಟ್ ೧೩ ರಿಂದ ೧೫ ರವರೆಗೆ ಪ್ರತಿ ಮನೆ, ಅಂಗಡಿ, ಮುಂಗಟ್ಟು, ಸರ್ಕಾರಿ ಮತ್ತು ಸರ್ಕಾರೇತರ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಲಾಯಿ ತ್ತೆಂದರು.
ವೇದಿಕೆಯಲ್ಲಿ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರಂಜನ್ ಮೂರ್ತಿ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ ಮತ್ತಿತರರು ಇದ್ದರು.
ಮಳೆ ಬಿಡುವು
ಪ್ರತಿವರ್ಷ ಮಳೆಯಿಂದ ಸ್ವಾತಂತ್ರೊೃೀತ್ಸವ ಆಚರಣೆಗೆ ಅಡ್ಡಿಯಾಗುತ್ತಿತ್ತು. ಆದರೆ, ಈ ವರ್ಷ ಮಳೆ ಸಂಪೂರ್ಣ ಬಿಡುವು ನೀಡಿತ್ತು. ಸ್ವಾತಂತ್ರೊೃೀತ್ಸವ ಕಾರ್ಯಕ್ರಮ ಮುಗಿದು ಅರ್ಧ ಗಂಟೆ ಬಳಿಕ ಮಡಿಕೇರಿಯಲ್ಲಿ ಮಳೆ ಸುರಿಯಲಾರಂಭಿಸಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಇನ್ಸ್‌ಪೆಕ್ಟರ್ ಚನ್ನನಾಯಕ್ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಪೊಲೀಸ್, ಅರಣ್ಯ, ಗೃಹರಕ್ಷಕ ದಳ ಸೇರಿದ್ದಂತೆ ವಿದ್ಯಾರ್ಥಿಗಳ ತಂಡದಿಂದ ಪಥ ಸಂಚಲನ ನಡೆಯಿತು.
ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಡಿದರು. ಭಾರತೀಯ ಮಹಿಳಾ ಹಾಕಿ ತಂಡದ ವ್ಯವಸ್ಥಾಪಕಿ ಅಂಕಿತಾ ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಬೃಹತ್ ರಾಷ್ಟ್ರಧ್ವಜ
ಕೋಟೆ ಆವರಣದಲ್ಲಿ ಬೃಹತ್ ಧ್ವಜಸ್ತಂಭ ಸ್ಥಾಪಿಸುವುದರ ಮೂಲಕ ಬೃಹತ್ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಕೋಟೆ ಆವರಣಕ್ಕೆ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಹುತೇಕರು ಬೃಹತ್ ರಾಷ್ಟ್ರಧ್ವಜವನ್ನು ಕುತೂಹಲಭರಿತವಾಗಿ ವೀಕ್ಷಿಸುವುದರೊಂದಿಗೆ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡರು.