ಅ.೪ ರಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ

kavigosti logo
Published on

ಮಡಿಕೇರಿ: ಮಡಿಕೇರಿ ನಗರ ದಸರಾ ಸಮಿತಿ, ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಬಹುಭಾಷಾ ಕವಿಗೋಷ್ಠಿ ಏರ್ಪಡಿಸಲಾಗಿದ್ದು, ಇಂದು(ಅ೪) ನಡೆಯಲಿದೆ ಎಂದು ಕವಿಗೋಷ್ಠಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಾಸಿರ್ ತಿಳಿಸಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿನ ಕಲಾ ಸಂಭ್ರಮ ವೇದಿಕೆಯಲ್ಲಿ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಉದ್ಘಾಟಿಸಲಿದ್ದಾರೆ. ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕವನ ಸಂಕಲನ ಬಿಡುಗಡೆಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.


ಮುಖ್ಯ ಅತಿಥಿಗಳಾಗಿ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ಬಿ.ರಾಜೇಶ್ ಯಲ್ಲಪ್ಪ, ಖಜಾಂಚಿ ಕುಟ್ಟನ ಶ್ವೇತಾ ಪ್ರಶಾಂತ್, ಗೌರವ ಕಾರ್ಯದರ್ಶಿ ವಿಜಯ, ಕೊಡಗು ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ.ಅನಂತಶಯನ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಪಾರ್ವತಿ ಅಪ್ಪಯ್ಯ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸ್ಕೌಟ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ, ಮಡಿಕೇರಿ ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷ ಎಚ್.ಟಿ.ಅನಿಲ್ ಉಪಸ್ಥಿತರಲಿದ್ದಾರೆ ಎಂದು ತಿಳಿಸಿದ್ದಾರೆ.


ಗೌರವ ಉಪಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ವೀರಾಜಪೇಟೆಯ ರಾಜೇಶ್ ಪದ್ಮನಾಭ, ಕುಶಾಲನಗರದ ಕೆ.ಎಸ್.ಮೂರ್ತಿ, ಸೋಮವಾರಪೇಟೆಟೆಯ ಎಸ್.ಡಿ.ವಿಜೇತ್, ಪೊನ್ನಂಪೇಟೆಯ ಕೋಳೇರ ದಯಾ ಚಂಗಪ್ಪ ಉಪಸ್ಥಿತರಿರಲಿದ್ದಾರೆ.


ಭಾಗವಹಿಸುವ ಕವಿಗಳು: ಕವಿಗೋಷ್ಠಿಗೆ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ವಿವಿಧ ಭಾಷೆಗಳಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಕವನಗಳು ಬಂದಿತ್ತು. ಈ ಪೈಕಿ ಆಯ್ಕೆ ಮಾಡಲಾದ ೬೫ ಕವಿಗಳಿಗೆ ಕವನ ವಾಚನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ ಭಾಷೆಯಲ್ಲಿ ಮಾಲಾಮೂರ್ತಿ, ಹೇಮಲತಾ ಪೂರ್ಣ ಪ್ರಕಾಶ್, ಪುಷ್ಪಲತಾ ಶಿವಪ್ಪ, ಪಿ.ಎಸ್.ವೈಲೇಶ್, ಸೌಮ್ಯ ಶೆಟ್ಟಿ, ರಾಣಿ ರವೀಂದ್ರ, ಕುಕ್ಕುನೂರು ರೇಷ್ಮಾ ಮನೋಜ್, ಲವಿನ್ ಲೋಪೆಸ್, ಜಲಾ ಕಾಳಪ್ಪ, ಹರೀಶ್ ಸರಳಾಯ, ವಸಂತಿ ರವೀಂದ್ರ, ಪಿ.ಆರ್.ವಿಮಲ, ದೀಪಿಕಾ ಸಂದೀಪ್, ಮಂಜು ಗೋಪಿನಾಥನ್, ರಜಿತಾ ಕಾರ್ಯಪ್ಪ, ಮುಸ್ತಫಾ ಬೆಳ್ಳಾರೆ, ಈರಮಂಡ ಹರಿಣಿ ವಿಜಯ್, ಶರ್ಮಿಳಾ ರಮೇಶ್, ಚಿ.ನಾ. ಸೋಮೇಶ್, ಕುಸುಮಾಕರ ಅಂಬೆಕಲ್ಲು, ಕೆ.ಎನ್.ಕವಿತಾ, ಕಾವ್ಯಾನಂದ ಕೋಳಿಬೈಲು, ಉಷಾ, ಯು.ಎನ್.ರೇಖಾ, ನೀರಬಿದಿರೆ ನಾರಾಯಣ ವಾಚಿಸಲಿದ್ದಾರೆ.


ಕೊಡವ ಭಾಷೆಯಲ್ಲಿ ಬೊಟ್ಟಂಗಡ ಸುಮನ್ ಸೀತಮ್ಮ, ಚಿಮ್ಮಚಿರ ಪವಿತ ರಜನ್, ತೆನ್ನೀರ ಟೀನಾ ಚಂಗಪ್ಪ, ಚಾಮೇರ ದಿನೇಶ್ ಬೆಳ್ಯಪ್ಪ, ಬೊಟ್ಟೊಳಂಡ ನಿವ್ಯ ದೇವಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ, ಅರೆಭಾಷೆಯಲ್ಲಿ ವಿನೋದ್ ಮೂಡಗದ್ದೆ, ಜಶ್ಮಿ ಕಲ್ಲುಮುಟ್ಲು, ಕುದುಪಜೆ ರಂಜಿತ್, ಡಾ. ಕೊಟ್ಟಕೇರಿಯನ್ ಲಾವಣ್ಯ, ಕಣಜಾಲು ಪೂವಯ್ಯ, ಬಾರಿಕೆ ಶೈಲಜಾ ದಿನೇಶ್ ವಾಚಿಸಲಿದ್ದಾರೆ. ತುಳು ಭಾಷೆಯಲ್ಲಿ ಸುಶೀಲ ಆರ್.ರಾವ್, ಕೆ.ಜಿ.ರಮ್ಯ, ಆಕೃತಿ ಭಟ್, ಮರಾಠಿ ಭಾಷೆಯಲ್ಲಿ ಭೀಮರಾವ್ ವಾಷ್ಟರ್, ಫ್ಲಾವಿಯಾ ಅಲ್ಬುಕರ್ಕ್, ಕೊಂಕಣಿ ಭಾಷೆಯಲ್ಲಿ ಜೋಯ್ಸ ಪಿಂಟೋ ವಾಚಿಸಲಿದ್ದಾರೆ.


ಕುಂಬಾರ ಭಾಷೆಯಲ್ಲಿ ಸುನಿತಾ ವಿಶ್ವನಾಥ್, ತಮಿಳು ಭಾಷೆಯಲ್ಲಿ ಎಸ್.ಸೈಮನ್, ಪೆರುಮಾಳ್ ಲಕ್ಷ್ಮಣ, ಹವ್ಯಕ ಭಾಷೆಯಲ್ಲಿ ಮುಳಿಯ ರಘುರಾಮ, ಯರವ ಭಾಷೆಯಲ್ಲಿ ಉಳುವಂಗಡ ಕಾವೇರಿ ಉದಯ, ಬ್ಯಾರಿ ಭಾಷೆಯಲ್ಲಿ ಅಮೀರ್ ಬನ್ನೂರು, ಮಕ್ಕಳ ವಿಭಾಗದಲ್ಲಿ ಕೇಡನ್ ಪ್ರಗತಿ, ಎ.ಜೆ.ಚಿಂತನ್, ಡಿ.ಪಿ.ದೃತಿ, ಕೆ.ಟಿ.ಪುಣ್ಯ, ಕೆ.ವಿ.ಸುಪ್ರ, ಯು.ಎಲ್.ಜನನಿ, ಡಿ.ಬಿ.ಜಶ್ಮಿತಾ, ಕೆ.ಎಂ.ರಝಾನ, ಪುನರ್ವಿ ಗೌಡ ಹೊಸಗದ್ದೆ, ಚಾಮೇರ ನಕ್ಷ ದೇಚಮ್ಮ, ಪಿ.ಎನ್.ಮಯೂರಿ, ಕಡ್ಲೇರ ಎಂ.ರುಷಿಕಾ, ಆಂಗ್ಲ ಭಾಷೆಯಲ್ಲಿ ಎಸ್.ಪಿ.ಜನ್ಮಿತಾ, ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ, ಹಿಂದಿ ಭಾಷೆಯಲ್ಲಿ ಮುಕ್ಕಾಟಿ ಮನೋಜ್ ಈರಪ್ಪರವರು ಕವನ ವಾಚನ ಮಾಡಲಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಚುಟುಕು ಸಾಹಿತಿ ಹಾ.ತಿ.ಜಯಪ್ರಕಾಶ್ ವಹಿಸಲಿದ್ದಾರೆ ಎಂದು ಎಂ.ಎನ್.ನಾಸಿರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net