

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮಡಿಕೇರಿ ದಸರಾ ಉತ್ಸವದಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷ್‌ತ್ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಜಾನಪದ ದಸರಾ ಆಯೋಜಿಸಲಾಗಿದೆ ಎಂದು ಜಾನಪದ ದಸರಾ ಸಂಚಾಲಕರಾದ ಎಚ್.ಟಿ. ಅನಿಲ್, ಎಸ್.ಐ. ಮುನೀರ್ ಅಹಮ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಧಿ ಜಯಂತಿ ಹಿನ್ನಲೆಯಲ್ಲಿ ಬೆಳಗ್ಗೆ ೯.೩೦ ಗಂಟೆಗೆ ಗಾಂಧಿ ಮಂಟಪದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುತ್ತದೆ. ಬೆಳಗ್ಗೆ ೧೦ ಗಂಟೆಗೆ ವಸ್ತು ಪ್ರದರ್ಶನ ಉದ್ಘಾಟಿಸಲಾಗುತ್ತದೆ. ೧೦.೧೫ ಗಂಟೆಗೆ ಜಾನಪದ ದಸರಕ್ಕೆ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ. ರಾಮಚಂದ್ರೇಗೌಡ ಚಾಲನೆ ನೀಡಲಿದ್ದಾರೆ.
ಮುಖ್ಯಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಉಪಾಧ್ಯಕ್ಷೆ ಸವಿತಾ ರಾಕೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂಭ ಬಳಿಕ ಜಾನಪದ ಕ್ರೀಡೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಚಾಲನೆ ನೀಡಲಿದ್ದಾರೆ. ಬೆಳಗ್ಗೆ ೧೧.೨೦ ಗಂಟೆಯಿಂದ ವೇದಿಕೆಯಲ್ಲಿ ಜಾನಪದ ವೈವಿಧ್ಯ ಕಾರ್ಯಕ್ರಮ ಮೂಡಿ ಬರಲಿವೆ. ಜಾನಪದ ನೃತ್ಯ, ಲಹರಿ ಕಲಾ ತಂಡದ ಜಾನಪದ ಹಾಡು, ಮೂರ್ನಾಡಿನ ಸೊಗಡು ಕಲಾ ತಂಡದಿಂದ ಹಾಡು, ನೃತ್ಯ ಪ್ರದರ್ಶನಗೊಳ್ಳಲಿದೆ.
ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜು ತಂಡ, ಚಿತ್ರಾ ಆರ್ಯನ್ ತಂಡ, ವೀಣಾ ತಂಡದಿಂದ ಗಾಯನ, ಶನಿವಾರಸಂತೆ ಜಾನಪದ ಪರಿಷತ್ ತಂಡ ನೃತ್ಯ- ಹಾಡು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂಡಗಳಿಂದ ನೃತ್ಯ, ಮಡಿಕೇರಿ ಜಾನಪದ ಪರಿಷತ್ ತಂಡದಿಂದ ಹಾಡು, ಜಾನಪದ ಕಲಾವಿದರ ಬಳಗ ಕೊಡಗು ತಂಡದಿಂದ ಗಾಯನ ಇರುತ್ತದೆ.
ಕಡಗದಾಳು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಹಾಡು- ನೃತ್ಯ, ಚೇರಂಬಾಣೆ ಗೌಡ ಸಮಾಜದಿಂದ ಅರೆಭಾಷೆ ನೃತ್ಯ- ಹಾಡು, ಸೋಮವಾರಪೇಟೆ ಜಾನಪದ ಘಟಕದಿಂದ ಹಾಡು- ಜಾನಪದ ನೃತ್ಯ, ಸೋಮವಾರಪೇಟೆಯ ಸಂತ ಜೋಸೇಫರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕೊಡಗು ಮಹಿಳಾ ಬರಹಗಾರರ ಒಕ್ಕೂಟದಿಂದ ಜಾನಪದ ಹಾಡು ಇರುತ್ತದೆ.
ಸಂಜೆ ಕಾರ್ಯಕ್ರಮ
ಮಡಿಕೇರಿ ತಾಲೂಕು ಯುವ ಜಾನಪದ ಬಳಗದಿಂದ ಹಾಡು, ನಾಗರಹೊಳೆ ನಾಣಚ್ಚಿ ಹಾಡಿಯ ರಮೇಶ್ ತಂಡದಿಂದ ಜಾನಪದ ನೃತ್ಯ, ಬಳ್ಳಾರಿಯ ಉಘೇಉಘೇ ಬಸವರಾಜು ತಂಡದಿಂದ ನೃತ್ಯ, ಪ್ರೋ.ಕೃಷ್ಣೇಗೌಡ ಅವರಿಂದ ಲಘು ಹಾಸ್ಯ ಜಾನಪದ ಮತ್ತು ಜೀವನ ಉಲ್ಲಾಸ ನಡೆಯಲಿದೆ. ತದನಂತರ ನಾಣಚ್ಚಿ ಹಾಡಿಯ ರಮೇಶ್ ತಂಡದಿಂದ ನೃತ್ಯ ವೈವಿಧ್ಯ ನಡೆಯಲಿದೆ.
ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷಎಚ್.ಟಿ. ಅನಿಲ್ ಉದ್ಘಾಟಿಸಲಿ ದ್ದಾರೆ. ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ವಹಿಸಲಿದ್ದಾರೆ.