ಕೊಡಗನ್ನು ಕೇಂದ್ರಾಡಳಿತ ಪ್ರವೇಶವೆಂದು ಘೋಷಿಸಲು ಸಿಎನ್‌ಸಿ ಆಗ್ರಹ

29mdko1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಸಂವಿಧಾನದಡಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಗಾಗಿ ೨ನೇ ರಾಜ್ಯ ಮರುಸಂಘಟನೆ ಆಯೋಗ ರಚನೆ ಮಾಡಬೇಕು. ೧೯೫೬ ರ ಹಿಂದಿನ ಸ್ಥಿತಿ ಮರುಸ್ಥಾಪಿಸಿ ಸಿ ರಾಜ್ಯದಿಂದ ಸಾಂವಿಧಾನಿಕವಾಗಿ ರೂಪಾಂತರಗೊಂಡ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸ ಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ತಮ್ಮ ಎರಡು ಪ್ರಮುಖ ಬೇಡಿಕೆಗಳೊಂದಿಗೆ ವಿವಿಧ ಹಕ್ಕೊತ್ತಾಯ ಮಂಡಿಸಿದರು.

೨ನೇ ರಾಜ್ಯ ಮರುಸಂಘಟನೆ ಆಯೋಗ ರಚನೆ ಅಥವಾ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲು ಒತ್ತಾಯಿಸಿ ನವೆಂಬರ್ ೧ ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಎನ್‌ಸಿಯಿಂದ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದೆಂದು ನಾಚಪ್ಪ ತಿಳಿಸಿದರು.

ಸಿ ಸ್ಟೇಟ್ಸ್ ಆಕ್ಟ್ ೧೯೫೨ ರ ಪ್ರಕಾರ ಕೊಡವ ತಾಯ್ನಡು ಕೂರ್ಗ್ ಭಾರತೀಯ ಒಕ್ಕೂಟದ ಭಾಗವಾಗಿ ಸ್ವಾವಲಂಬಿ ಸಿ ರಾಜ್ಯವಾಯಿತು. , ಆಗಿನ ಉಪಪ್ರಧಾನಿ ಸರ್ದಾರ್ ವಲ್ಲಬಾಯಿ ಪಟೇಲ್ ಅವರು ಸಂಸತ್ತಿನಲ್ಲಿ ಕೂರ್ಗ್‌ನ್ನು ಭಾರತದ ಏಕೈಕ ರಾಮ ರಾಜ್ಯ ಎಂದು ಹೆಮ್ಮೆ ಯಿಂದ ಹೇಳಿದ್ದರು.

ಅಪರಾಧಲ್ಲವಿದ, ಭ್ರಷ್ಟಾಚಾರ ಮುಕ್ತ, ಶಾಂತಿಯುತ, ಸಂತೃಪ್ತ ರಾಜ್ಯ ಕೂರ್ಗ್ ಆಗಿತ್ತು. ೧೯೫೨ ರಿಂದ ೧೯೫೬ ರವರೆಗೆ ಒಂದು ಸುವರ್ಣ ಯುಗದ ರಾಜ್ಯವಾಗಿ ಅಭಿವೃದ್ಧಿ ಹೊಂದುವ ಹಾದಿಯಲ್ಲಿತ್ತು. ಆದರೆ, ಅನ್ಯಾಯದ ರಾಜ್ಯ ಮರು-ಸಂಘಟನೆ ಕಾಯ್ದೆ ೧೯೫೬ ರ ಅಡಿ ವಿಶಾಲ ಮೈಸೂರಿನೊಂದಿಗೆ ಕೂರ್ಗ್ ಲೀನಕ್ಕೆ ಕಾರಣವಾಯಿತು. ನಂತರ ನಮ್ಮೆಲ್ಲ ಭರವಸೆಗಳು ಹಾಗೂ ಆಕಾಂಕ್ಷೆಗಳನ್ನು ಛಿದ್ರಗೊಳಿಸಲಾುತು ಎಂದು ನಾಚಪ್ಪ ಆರೋಪಿಸಿದರು.

ಕೊಡಗಿನ ಆದಿವಾಸಿ ಮೂಲನಿವಾಸಿ ಕೊಡವ ಜನಾಂಗವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು, ಕೊಡವ ಜನಾಂಗೀಯ ಸಂಸ್ಕಾರ ಗನ್ ಅನ್ನು ಸಂವಿಧಾನದ ೨೫ ಮತ್ತು ೨೬ ನೇ ವಿಧಿಯಡಿ ಅಡಿಯಲ್ಲಿ ಸಿಖ್ಖರ ಕಿರ್ಪಾನ್‌ಗೆ ಸಮಾನವಾಗಿ ರಕ್ಷಿಸಬೇಕು, ಕೊಡವ ಜನಾಂಗದ ಪ್ರಾಚೀನ ಮತ್ತು ಶ್ರೀಮಂತ ಮಾತೃ ಭಾಷೆ ‘‘ಕೊಡವ ಥಕ್’’ ಅನ್ನು ಸಂವಿಧಾನದ ೮ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು, ಕೊಡವ ಸಂಸ್ಕೃತಿ- ಜಾನಪದ ಪರಂಪರೆಯನ್ನು ಯುನೆಸ್ಕೋದ ಸಾಂಸ್ಕೃತಿಕ ಪರಂಪರೆ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿದರು.

ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸಿಎನ್‌ಸಿ ಪ್ರಮುಖರಾದ ಕಲಿಯಂಡ ಮೀನಾಕ್ಷಿ ಕಾರ್ಯಪ್ಪ, ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತಾ ಗಣಪತಿ, ಕೂಪದೀರ ಪುಷ್ಪಾ ಮುತ್ತಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಿನಿಕಂಡ ಇನಿತಾ ಮಾಚಯ್ಯ, ಕಲಿಯಂಡ ಪ್ರಕಾಶ್, ಅಜ್ಜಿಕುಟ್ಟೀರ ಲೋಕೇಶ್, ಅರೆಯಡ ಗಿರೀಶ್, ಅಲ್ಮಂಡ ಜೈ, ಬೇಪಡಿಯಂಡ ದಿನು, ಪಟ್ಟಮಾಡ ಕುಶ, ಕಿರಿಯಮಾಡ ಶೆರಿನ್, ಮಂದಪಂಡ ಮನೋಜ್, ಕಾಟುಮಣಿಯಂಡ ಉಮೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ನಂದಿನೆರವಂಡ ವಿಜು, ಕೂಪದೀರ ಸಾಬು, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಅಯ್ಯಣ್ಣ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಅಜ್ಜಿನಿಕಂಡ ಸನ್ನಿ ಮಾಚಯ್ಯ, ಐಲಪಂಡ ಮಿಟ್ಟು, ಚೋಳಪಂಡ ಜ್ಯೋತಿ ನಾಣಯ್ಯ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net