ನಗರಸಭೆ ಬಿಜೆಪಿ ಸದಸ್ಯ ಕೆ.ಎಂ. ಅಪ್ಪಣ್ಣ ಸದಸ್ಯತ್ವ ರದ್ದಿಗೆ ಮನವಿ

23mdka1 - Copy
Published on

ಮಡಿಕೇರಿ: ನಗರಸಭೆ ಬಿಜೆಪಿ ಸದಸ್ಯ ಕೆ.ಎಂ. ಅಪ್ಪಣ್ಣ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದರಿಂದ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಎಸ್‌ಡಿಪಿಐ ಆಗ್ರಹಿಸಿದೆ. ಎಸ್‌ಡಿಪಿಐ ನಗರಸಭೆ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ನಿಯಮ ಬಾಹಿರವಾಗಿ ಲಾಭದಾಯಕ ವ್ಯವಹಾರ ಮಾಡಿರುವುದನ್ನು ಪರಿಶೀಲಿಸಿ ಸದಸ್ಯತ್ವ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
೧೯ನೇ ವಾರ್ಡ್ ಸದಸ್ಯ ಅಪ್ಪಣ್ಣ ತಮ್ಮ ಮಾಲಿಕತ್ವದಲ್ಲಿರುವ ಪ್ಲಾಂಟರ್ಸ್ ವಲ್ಡರ್ ಸಂಸ್ಥೆ ಮುಖಾಂತರ, ಕಾಡು ಕಡಿಯುವ ಯಂತ್ರದ ದುರಸ್ತಿ ಕೆಲಸ ಮಾಡಿದ್ದಾರೆಂದು ದಾಖಲೆ ಸಹಿತ ಪುಕಾರು ಸಲ್ಲಿಸಿದರು.

ನಗರಸಭೆಯಿಂದ ೨೯.೧೦.೨೦೨೧ ರಿಂದ ಇಂದಿನವರೆಗೆ ಕಾಡು ಕಡಿಯುವ ಯಂತ್ರ ದುರಸ್ತಿ ಮಾಡಿ ಹಣ ಪಡೆದುಕೊಂಡಿರುವುದು ದೃಢ ವಾಗಿದೆ. ನಗರಸಭೆಗೆ ಸಲ್ಲಿಸಿದ ಜಿಎಸ್‌ಟಿ ಟ್ಯಾಕ್ಸ್ ಬಿಲ್ಲಿನಲ್ಲಿ ನಮೂದಿಸಿರುವ ಜಿಎಸ್‌ಟಿ ಸಂಖ್ಯೆ ಹಾಗೂ ಪಾನ್ ಸಂಖ್ಯೆ ಇವರ ಹೆಸರಿನಲ್ಲಿ ನೊಂದಾವಣೆಗೊಂಡಿದೆ. ಇವರದ್ದೇ ಪಾನ್ ಸಂಖ್ಯೆಯಲ್ಲಿ ಟಿಡಿಎಸ್ ಆದಾಯ ತೆರಿಗೆ ಇಲಾಖೆಗೆ ಪಾವತಿಸಲಾಗಿದೆ ಎಂದು ನಗರಸಭೆ ಎಸ್‌ಡಿಪಿಐ ಸದಸ್ಯ ಅಮೀನ್ ಮೊಹಿಸಿನ್ ಆರೋಪಿಸಿದರು.

ಈ ವಿಚಾರವನ್ನು ಆ.೮ ರಂದು ನಡೆದ ನಗರಸಭೆ ಮಾಸಿಕ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ವಿನಾಕಾರಣ ಗೊಂದಲ ಉಂಟು ಮಾಡಿದ್ದರು. ಈ ವಿಷಯ ಮರೆಮಾಡುವ ಉದ್ದೇಶದಿಂದ ತನಗೆ ಮಾತನಾಡಲು ಅವಕಾಶ ನೀಡದೆ ಗದ್ದಲ ಮಾಡಿರು ತ್ತಾರೆಂದು ಆರೋಪಿಸಿದರು.

ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ ರ ಪ್ರಕರಣ ೧೬(೧)(ಇ) ಯಲ್ಲಿ ನಗರಸಭೆಯ ಯಾವುದೇ ಚುನಾಯಿತ ಸದಸ್ಯ ನಗರಸಭೆ ಯಲ್ಲಿ ಲಾಭದಾಯಕ ಕೆಲಸ ಕಾರ್ಯ ಮಾಡಿದರೆ ಸದಸ್ಯತ್ವ ಸ್ಥಾನಕ್ಕೆ ಅನರ್ಹರಾಗಿರುತ್ತಾರೆ. ದಾಖಲೆ ಪರಿಶೀಲಿಸಿ ಕೆ.ಎಂ ಅಪ್ಪಣ್ಣ
ಸದಸ್ಯತ್ವ ರದ್ದು ಮಾಡಬೇಕೆಂದು ಮನವಿ ಮಾಡಿದರು. ನಗರಸಭೆ ಎಸ್‌ಡಿಪಿಐ ಸದಸ್ಯರಾದ ಮನ್ಸೂರ್ ಆಲಿ, ಮೇರಿ ವೇಗಸ್, ನೀಮಾ ಅರ್ಷಾದ್, ಬಶೀರ್ ಅಹಮದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net