

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡವ ಮಕ್ಕಡ ಕೂಟ ಹಾಗೂ ಕಾವೇರಿಕೇರಿ ಕೊಡವ ಸಂಘ ಸಂಯುಕ್ತಾಶ್ರಯದಲ್ಲಿ ಫೆ.೧೯ ರಂದು ವಕೀಲ ಬಾಳೆಯಡ ಕಿಶನ್ ಪೂವಯ್ಯ ಬರೆದಿರುವ ಎರಡು ಪುಸ್ತಕ ಲೋಕಾರ್ಪಣೆಗೊಳ್ಳಲಿವೆ. ಕೊಡವ ಮಕ್ಕಡ ಕೂಟದ ೬೧ ಮತ್ತು ೬೨ನೇ ಪುಸ್ತಕವಾಗಿ ಕಿಶನ್ ಪೂವಯ್ಯ ಬರೆದಿರುವ ಕೃತಿಗಳು ಪ್ರಕಟಗೊಳ್ಳಲಿವೆ.
ಅಂದು ಬೆಳಗ್ಗೆ ೧೦.೩೦ ಗಂಟೆಗೆ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಉದ್ಘಾಟಿಸಲಿದ್ದು, ಕಾವೇರಿಕೇರಿ ಕೊಡವ ಸಂಘ ಅಧ್ಯಕ್ಷ ಬಲ್ಯಾಟಂಡ ಲತಾ ಚಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಜಕೀಯ ಮತ್ತು ಪ್ರಕೃತಿ ಪುಸ್ತಕವನ್ನು ಸಾಹಿತಿ ಕೆ.ಪಿ. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ ಪುಸ್ತಕವನ್ನು ಎಕ್ಸ್‌ಪ್ರೆಸ್ ಲಿಮಿಟೆಡ್ ಸೌತ್ ಬ್ಲೂ ಡಾರ್ಟ್ ಹಿರಿಯ ಉಪಾಧ್ಯಕ್ಷ ಬಾಳೆಯಡ ಸಿ.ಕಾಳಪ್ಪ ಬಿಡುಗಡೆ ಮಾಡಲಿದ್ದಾರೆ.
ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಪುಸ್ತಕ ಪರಿಚಯ ಮಾಡಲಿದ್ದಾರೆ. ಮುಖ್ಯಅತಿಥಿಯಾಗಿ ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ.