ಸಾಹಿತ್ಯ ಸಮ್ಮೇಳನ ಬಹಿಷ್ಕರಿಸಲು ವಿಶ್ವನಾಥ್ ಕರೆ

4mdkj1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಹಾವೇರಿಯಲ್ಲಿ ಆಯೋಜಿಸಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಾರತಮ್ಯದಿಂದ ಕೂಡಿರುವುದರಿಂದ ಸಮ್ಮೇಳನವನ್ನು ಧಿಕ್ಕರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಕರೆ ನೀಡಿದದರು.

ಆಳ್ವಿಕೆ ನಡೆಸುತ್ತಿರುವ ಪಕ್ಷವನ್ನು ಓಲೈಕೆ ಮಾಡುವ, ಜಾತಿ- ಧರ್ಮ ಆಧಾರದಲ್ಲಿ ತಾರತಮ್ಯ ಮೂಡಿಸುವ ಸಮ್ಮೇಳನ ಕನ್ನಡಿಗರ ಹೃದಯ ದ ಮೇಲೆ ಬರೆ ಎಳೆದಂತೆ ಮಾಡಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿಯೊಬ್ಬ ಕನ್ನಡಿಗರ ಸಮ್ಮೇಳನ ಆಗಬೇಕು. ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಮೈಸೂರು ಮಹಾರಾಜರು ಕಟ್ಟಿದ ಸಂಸ್ಥೆ. ಪ್ರತಿಯೊಬ್ಬ ಕನ್ನಡಿಗರು ಪಾಲ್ಗೊಳ್ಳಲು ಮುಕ್ತ ಅವಕಾಶ ಸಮ್ಮೇಳನದಲ್ಲಿರಬೇಕು. ಆದರೆ, ಆಹ್ವಾನ ಪತ್ರಿಕೆ ನೋಡುವಾಗ ಎಲ್ಲಾ ರಾಜಕೀಯ ಪಕ್ಷಗಳ ಸಮ್ಮೇಳನದಂತಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ೨೦ ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸುಮ್ಮನೆ ಕೂತಿರುವುದು ಸರಿಯಲ್ಲ. ಮುಖ್ಯಮಂತ್ರಿ ಕ್ಷೇತ್ರದಲ್ಲಿ ಆಯೋಜಿ ಸಿರುವ ಸಾಹಿತ್ಯ ಸಮ್ಮೇಳನ ಬಗ್ಗೆ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಕನ್ನಡ ಸಂಸ್ಕೃತಿ ಇಲಾಖೆ ಮಾಜಿ ಸಚಿವರು, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಸೇರಿದ್ದಂತೆ ಪ್ರಮುಖರ ಸಭೆ ಕರೆಯಬೇಕಿತ್ತು. ಸಾರಸತ್ವ ಲೋಕ ಸಂತೋಷ ಪಡುವ ಸಮ್ಮೇಳನವಾಗಬೇಕಾ ಗಿತ್ತು. ಬಹುತ್ವದ ಸಾಹಿತ್ಯಕ್ಕೆ ಅವಕಾಶ ನೀಡಬೇಕಿತ್ತೆಂದರು.

ಹಿಂದು, ಕ್ರಿಶ್ಚಿಯನ್, ಮುಸ್ಲಿಂ, ದಲಿತರು, ಮಹಿಳೆಯರು ಸೇರಿದ್ದಂತೆ ಪ್ರತಿಯೊಬ್ಬರು ಪಾಲ್ಗೊಳ್ಳುವ ಸಮಾವೇಶ ಆಯೋಜಿಸಬೇಕಾಗಿತ್ತು. ೮೫ ಸನ್ಮಾನಿತರ ಪೈಕಿ ಒಬ್ಬ ಮುಸ್ಲಿಂ ಇಲ್ಲ. ದಲಿತರನ್ನು ಸನ್ಮಾನಕ್ಕೆ ಪರಿಗಣಿಸಲಿಲ್ಲ. ಲೇಖಕಿಯರೂ ಇಲ್ಲ. ಸ್ವಾತಂತ್ರೃಕ್ಕಾಗಿ, ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದವರೂ ಇಲ್ಲ. ಅಖಿಲ ಭಾರತ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ ಪಡೆದವರನ್ನೂ ಗೌರವಿಸುವ ಗೋಜಿಗೆ ಹೋಗಿಲ್ಲ ಎಂದು ಟೀಕಿಸಿದರು.

ಸಮ್ಮೇಳನ ಅಂದರೆ ಊಟ, ಭಜಂತ್ರಿ, ಕಿರೀಟಿ ಹಾಕಿಸಿಕೊಳ್ಳಲು ಇರುವುದಾ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡ ಲೇಖಕರ ಕೃತಿಗಳಿಗೆ ೩ ವರ್ಷದಿಂದ ಹಣ ಪಾವತಿಸಿಲ್ಲ. ಈ ವಿಚಾರದ ಕುರಿತು ಸಮ್ಮೇಳನದಲ್ಲಿ ಚರ್ಚಿಸಬೇಕಿತ್ತು. ನಾನೇ ನಾನೇ ಎಂದು ಹೋಗುವುದು ಸರಿ ಯಲ್ಲ. ಈ ಕಾರಣಕ್ಕಾಗಿ ಹಲವರು ಸಮ್ಮೇಳನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ದಿಕ್ಕು, ದೆಸೆ ಇಲ್ಲದ ಸಾಹಿತ್ಯ ಸಮ್ಮೇಳನವನ್ನು ಧಿಕ್ಕರಿಸ ಬೇಕು. ನಾನೂ ಕೂಡ ಡೋಂಗಿ ಸಾಹಿತ್ಯ ಸಮ್ಮೇಳನ ಧಿಕ್ಕರಿಸುತ್ತೇನೆಂದರು.

ರಾಜ್ಯದಲ್ಲಿ ಕನ್ನಡ ಮಾತನಾಡುವ ೭೦ ಲಕ್ಷ ಮುಸ್ಲಿಂರಿದ್ದಾರೆ. ಬ್ಯಾರಿ ಮಾತನಾಡುವ ೧೪ ಲಕ್ಷ ಜನರಿದ್ದಾರೆ. ಕೊಡವ, ತುಳು, ಬ್ಯಾರಿ ಭಾಷಿಕ ರನ್ನು ಪರಿಗಣಿಸಿಲ್ಲ. ನನ್ನ ವಾಹನ ಚಾಲಕ ಮುಸ್ಲಿಂ. ಶಾಮಿಯಾನ ಹಾಕುವವರು, ಮೈಕ್ ಜೋಡಿಸುವವರು ಮುಸ್ಲಿಂ ಎಂದು ಕಸಾಪ ಅಧ್ಯಕ್ಷರು ಹೇಳುತ್ತಿದ್ದಾರೆಂದು ಅತೃಪ್ತಿ ವ್ಯಕ್ತ ಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ, ೭ ಪುಸ್ತಕ ಬರೆದಿರುವ, ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯನಾಗಿ ಸರ್ಕಾರದಿಂದ ನಾಮಕರಣಗೊಂಡಿರುವ ನನಗೂ ಆಹ್ವಾನ ಪತ್ರಿಕೆ ಕಳುಹಿಸಿಲ್ಲ. ವಿದ್ಯಾರ್ಥಿ ದಿನದಿಂದಲೂ ಕನ್ನಡ ಹೋರಾಟದಲ್ಲಿ ಗುರುತಿಸಿಕೊಂಡಿದ್ದೇನೆ. ಪ್ರತಿಯೊಂದು ಸಮ್ಮೇಳನದಲ್ಲಿ ೩ ದಿನ ಪ್ರೇಕ್ಷಕನಾಗಿ ಹೋಗಿ ಬರುತ್ತಿದೆ. ಆದರೆ, ಹಾವೇರಿ ಸಮ್ಮೇಳನ ಕನ್ನಡಿಗರನ್ನು ವಿಜಭನೆ ಮಾಡುತ್ತಿರು
ವುದರಿಂದ ಹೋಗುತ್ತಿಲ್ಲ ಎಂದರು.

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕಾಂಗ್ರೆಸ್ ಸೇರುವ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧವಾಗಿದ್ದೇನೆ. ನನ್ನಲ್ಲಿ ಯಾವ ಮುಚ್ಚುಮರೆಯೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ಹೇಳಿದರು.

ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯನಾಗಿ ನಾಮಕರಣ ಮಾಡಿದ ವೇಳೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ನೀಡಿದ್ದೆ. ಪಕ್ಷದ ಸದಸ್ಯತ್ವ ಇದ್ದಲ್ಲಿ ರಾಜ್ಯಪಾಲರಿಗೆ ನೇಮಕ ಮಾಡಲು ಸಾಧ್ಯವಾಗುವುದಿಲ್ಲ. ಈಗಲೂ ನಾನು ಬಿಜೆಪಿಯಲ್ಲಿದ್ದೇನೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದ್ದಂತೆ ಹೊರಗಿನ ಶಕ್ತಿಗಳು ಆಳ್ವಿಕೆ ನಡೆಸುತ್ತಿದೆ. ಇದು ಸಾಂವಿಧಾನಿಕ ವ್ಯವಸ್ಥೆಗೆ ಧಕ್ಕೆವುಂಟು ಮಾಡುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಬಿಜೆಪಿ ಸರ್ಕಾರ ಒಳ್ಳೇಯದು ಮಾಡುತ್ತದೆ ಅಂದುಕೊಂಡಿದ್ದೆ. ರಾಜ್ಯಕ್ಕೆ ಜನರಿಗೆ ಒಳ್ಳೆಯದು ಆಗಲಿಲ್ಲ. ಜನಸಾಮಾನ್ಯರಿಗೂ ಒಳ್ಳೆಯ ಕೆಲಸ ಕೊಟ್ಟಿಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net