9 ಜನಕ್ಕೆ ಕರೊನಾ ಸೋಂಕು

10mdkj1
Published on

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 9 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 131ಕ್ಕೇರಿದೆ. ಈವರೆಗೆ 18 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. 112 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ 53 ನಿಯಂತ್ರಿತ ಪ್ರದೇಶಗಳಿವೆ.

ವಿರಾಜಪೇಟೆ ತಾಲೂಕಿನ ತಿತಿಮತಿಯಲ್ಲಿ ಈ ಹಿಂದೆ ಸೋಂಕು ಪತ್ತೆಯಾಗಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 65 ವರ್ಷದ ಮಹಿಳೆ, 32 ವರ್ಷದ ಪುರುಷ, 45 ವರ್ಷದ ಪುರುಷ , 35 ವರ್ಷದ ಮಹಿಳೆ, 20 ವರ್ಷದ ಪುರುಷ, 19 ವರ್ಷದ ಹುಡುಗ ಮತ್ತು 45 ವರ್ಷದ ಪುರುಷ ಸೇರಿ 7 ಜನರಿಗೆ ಸೋಂಕು ದೃಢಪಟ್ಟಿದೆ.

ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಪ್ಪಯ್ಯ ಸ್ವಾಮಿ ರಸ್ತೆಯ ನಿವಾಸಿ, ಜ್ವರ ಲಕ್ಷಣಗಳಿದ್ದ 55 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇವರು ಪ್ರಸ್ತುತ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಎಂ ಬಡಾವಣೆಯಲ್ಲಿ ನೆಲೆಸಿದ್ದಾರೆ. ಕುಟ್ಟ ಗ್ರಾಮದ ಜ್ವರ ಲಕ್ಷಣಗಳಿದ್ದ 34 ವರ್ಷದ ಪುರುಷರೊಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಹೊಸದಾಗಿ ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ, ಗೋಣಿಕೊಪ್ಪಲಿನ ಎಂಎಂ ಬಡಾವಣೆ, ಕುಟ್ಟ ಗ್ರಾಮದಲ್ಲಿ ಸೋಂಕಿತ ನೆಲೆಸಿದ್ದ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ.

ಸರ್ಕಾರದ ನಿಯಮಾನುಸಾರ 14 ದಿನದ ಸೀಲ್‌ಡೌನ್ ಅವಧಿ ಪೂರ್ಣಗೊಳಿಸಿದ ಜಿಲ್ಲೆಯ 8 ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಬಿಟ್ಟಂಗಾಲ, ಕಗ್ಗೋಡ್ಲು, ಕೋಟೆ ಮಾರಿಯಮ್ಮ ದೇವಸ್ಥಾನ ರಸ್ತೆ, ಮುಳ್ಳೂರು, ಪುಟಾಣಿ ನಗರ, ಕುಶಾಲನಗರ ರಥಬೀದಿ, ತಾಳತ್ತಮನೆ, ಬಳಗುಂದ ಸೀಲ್‌ಡೌನ್‌ನಿಂದ ಮುಕ್ತಿಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net