ಸೆ.೧೭ ರಂದು ಮಾದಿಗ ಜನಜಾಗೃತಿ ಸಮಾವೇಶ

bkt-14-1
ಬಾಗಲಕೋಟೆ ನಗರದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರು ಪೋಸ್ಟರ ಬಿಡುಗಡೆಗೊಳಿಸಿದರು. ಮುಖಂಡರಾದ ಪೀರಪ್ಪ ಮ್ಯಾಗೇರಿ, ಶ್ಯಾಮರಾವ ಘಾಟಗೆ, ವೈ.ವೈ.ತಿಮ್ಮಾಪುರ, ರಾಜು ಮನ್ನಿಕೇರಿ, ಶಂಕರ ಪೂಜಾರಿ ಇತರರಿದ್ದರು
Published on

ಬಾಗಲಕೋಟೆ: ಜಿಲ್ಲಾ ಮಾದಿಗ ಸಮಾಜದಿಂದ ಮಾದಿಗ ಜನ ಜಾಗೃತಿ ಸಮಾವೇಶವನ್ನು ಸೆ.೧೭ ರಂದು ನಗರದ ಕಾಳಿದಾಸ ಮೈದಾನದಲ್ಲಿ ಬೆಳಗ್ಗೆ ೧೧ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ಪೀರಪ್ಪ ಮ್ಯಾಗೇರಿ ಹೇಳಿದರು.

ನಗರದ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಗುರು ಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹಾಗೂ ಹಿರಿಯೂರಿನ ಆದಿಜಾಂಬವ ಗುರುಪೀಠದ ಷಡಕ್ಷರಿ ಮುನಿಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಎಚ್.ವೈ.ಮೇಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಅಂಬೇಡ್ಕರ್ ಹಾಗೂ ಜಗಜೀವನ ರಾಮ ಅವರ ಭಾವಚಿತ್ರಕ್ಕೆ ಮಾಜಿ ಸಚಿವ ಎಸ್.ಆರ್.ಪಾಟೀಲ ಮಾಲಾರ್ಪಣೆ ನೆರವೇರಿಸಲಿದ್ದಾರೆ ಎಂದರು.

ನೂತನ ಶಾಸಕರಾಗಿ ಆಯ್ಕೆಯಾದ ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಬಿ.ವಿ.ಚಿಮ್ಮನಕಟ್ಟಿ, ವಿಪ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸುನೀಲಗೌಡ ಪಾಟೀಲ ಹಾಗೂ ಉಮಾಶ್ರೀ ಅವರನ್ನು ಸತ್ಕರಿಸಲಾಗುತ್ತದೆ. ಜೊತೆಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಶಾಸಕ ಆನಂದ ನ್ಯಾಮಗೌಡ, ಎಂ.ಆರ್.ಎಚ್.ಎಸ್ ಮುಖಂಡ ಅಂಬಣ್ಣ ಅರೋಳಿಕರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ ಹಾಗೂ ಬಸವಪ್ರಭು ಸರನಾಡಗೌಡರ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಬಿಜೆಪಿ ಶಾಸಕರಿಗೆ ನಾವು ಆಹ್ವಾನಿಸಿದ್ದೇವೆ. ಆದರೆ, ಅವರು ಪೂರ್ವನಿಯೋಜಿತ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾರೆ. ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲ. ಸಮಾಜದ ಕಾರ್ಯಕ್ರಮ ಎಂದು ಸ್ಪಷ್ಟ ಪಡಿಸಿದರು.

ಮುಖಂಡರಾದ ಶ್ಯಾಮರಾವ ಘಾಟಗೆ, ವೈ.ವೈ.ತಿಮ್ಮಾಪುರ, ರಾಜು ಮನ್ನಿಕೇರಿ, ಶಂಕರ ಪೂಜಾರಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net